ಹೂವು ಚೆಲುವೆಲ್ಲ – Hoovu Cheluvella Nandenditu Song Lyrics in Kannada – Hannele Chiguridaaga


ಹಣ್ಣೆಲೆ ಚಿಗುರಿದಾಗ
ಸಂಗೀತ: ಎಂ ರಂಗರಾವ್
ಸಾಹಿತ್ಯ: RN ಜಯಗೋಪಾಲ್
ಗಾಯಕಿಪಿ.ಸುಶೀಲ

ಹೂವು ಚೆಲುವೆಲ್ಲ ನಂದೆಂದಿತು

ಹೂವು ಚೆಲುವೆಲ್ಲ ನಂದೆಂದಿತು

ಹೆಣ್ಣು ಹೂವ ಮುಡಿದು

ಚೆಲುವೇ ತಾನೆಂದಿತು

ಹೂವು ಚೆಲುವೆಲ್ಲ ನಂದೆಂದಿತು

ಕೋಗಿಲೆಯು ಗಾನದಲ್ಲಿ..
ನಾನೇ ದೊರೆಯೆಂದಿತು

321
ಕೋಗಿಲೆಯು ಗಾನದಲ್ಲಿ
ನಾನೇ ದೊರೆಯೆಂದಿತು..
ಕೊಳಲಿನ ದನಿ ವೀಣೆಯ ಖನಿ

ಕೊರಳಲಿ ಇದೆಯೆಂತು
ಕೊಳಲಿನ ದನಿ

ವೀಣೆಯ ಖನಿ

ಕೊರಳಲಿ ಇದೆಯೆಂತು

ಹೆಣ್ಣು ವೀಣೆ ಹಿಡಿದ

ಶಾರದೆಯೆ ಹೆಣ್ಣೆoದಿತು

ಹೂವು ಚೆಲುವೆಲ್ಲ ನಂದೆಂದಿತು




ನವಿಲೊಂದು ನಾಟ್ಯದಲ್ಲಿ..
ತಾನೇ ಮೊದಲೆಂದಿತು..
321
ನವಿಲೊಂದು ನಾಟ್ಯದಲ್ಲಿ..
ತಾನೇ ಮೊದಲೆಂದಿತು..
ಕೆದರುತೆ ಗರಿ ಕುಣಿಯುವ ಪರಿ

ಕಣ್ಣಿಗೆ ಸೊಂಪೆಂತು..
ಕೆದರುತೆ ಗರಿ ಕುಣಿಯುವ ಪರಿ

ಕಣ್ಣಿಗೆ ಸೊಂಪೆಂತು..
ಹೆಣ್ಣು ನಾಟ್ಯದರಸಿ

ಪಾರ್ವತಿಯೆ ಹೆಣ್ಣೆoದಿತು

ಹೂವು ಚೆಲುವೆಲ್ಲ ನಂದೆಂದಿತು



ಮುಗಿಲೊಂದು ಬಾನಿನಲ್ಲಿ

ತಾನೇ ಮಿಗಿಲೆಂದಿತು..
321
ಮುಗಿಲೊಂದು ಬಾನಿನಲ್ಲಿ

ತಾನೇ ಮಿಗಿಲೆಂದಿತು..
ನೀಡುವೆ ಮಳೆ ತೊಳೆಯುವೆ ಕೊಳೆ

ಸಮನಾರೆನಗೆಂತು

ನೀಡುವೆ ಮಳೆ ತೊಳೆಯುವೆ ಕೊಳೆ

ಸಮನಾರೆನಗೆಂತು

ಹೆಣ್ಣು ಪಾಪ ತೊಳೆವ

ಸುರಗಂಗೆ ಹೆಣ್ಣೆoದಿತು

ಹೂವು ಚೆಲುವೆಲ್ಲ ನಂದೆಂದಿತು

ಹೆಣ್ಣು ಹೂವ ಮುಡಿದು ಚೆಲುವೇ

ತಾನೆಂದಿತು

ಹೂವು ಚೆಲುವೆಲ್ಲ ನಂದೆಂದಿತು..

Leave a Reply

Your email address will not be published. Required fields are marked *