ಹಾಡುವ ಮುರಳಿಯ – Haaduva Muraliya Song Lyrics – Ananda Bhairavi

ಚಿತ್ರ: ಆನಂದ ಭೈರವಿ

ಸಂಗೀತ : ರಮೇಶ್ ನಾಯ್ಡು
ಗಾಯನ : ಡಾ.ಎಸ್.ಪಿ.ಬಿ
ವಾಣಿಜಯರಾಮ್

ಹಾಡುವ ಮುರಳಿಯ
ಕುಣಿಯುವ ಗೆಜ್ಜೆಯ
ಎದೆಯಲಿ ಒಂದೇ ರಾಗ
ಅದು ಆನಂದ ಭೈರವಿ ರಾಗ
ಕರೆಯುವ ಕೊಳಲಿನ
ನಲಿಯುವ ಗೆಜ್ಜೆಯ
ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ

♫♫♫♫♫♫♫♫♫♫♫♫


ಹೊಳೆವ ಗೆಜ್ಜೆಯ ನಾದವ ಕೇಳಿ
ನಾಟ್ಯ ಸರಸ್ವತಿ ಕುಣಿದು

ಹೊಳೆವ ಗೆಜ್ಜೆಯ ನಾದವ ಕೇಳಿ
ನಾಟ್ಯ ಸರಸ್ವತಿ ಕುಣಿದು
ಮನಸು ಮುರಳಿಯ ಗಾನದಿ
ಸೇರಿ ಮಧುರಾ ನಗರಿಗೆ ತೇಲಿ

ಯುಮುನಾ ನದಿಯಲಿ ಈಜುತಿದೆ
ಸ್ವರಗಳ ಅಲೆಯಲಿ ತೇಲುತಿದೆ
ಕರೆಯುವ ಕೊಳಲಿನ ನಲಿಯುವ
ಗೆಜ್ಜೆಯ ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ
ಹಾಡುವ ಮುರಳಿಯ ಕುಣಿಯುವ
ಗೆಜ್ಜೆಯ ಎದೆಯಲಿ ಒಂದೇ ರಾಗ
ಅದು ಆನಂದ ಭೈರವಿ ರಾಗ
♫♫♫♫♫♫♫♫♫♫♫♫

ಹೆಜ್ಜೆಯ ತಾಳ ಗೆಜ್ಜೆಯ ಮೇಳ
ಜೀವವ ಕುಣಿಸಿರುವಾಗ

ಹೆಜ್ಜೆಯ ತಾಳ ಗೆಜ್ಜೆಯ ಮೇಳ
ಜೀವವ ಕುಣಿಸಿರುವಾಗ
ಕಣ್ಣೇ ಕವಿತೆಯ ಹಾಡಿ ಕುಣಿಸಿ
ಪ್ರೀತಿಯ ತುಂಬಿರುವಾಗ

ಹರುಷದಿ ಹೃದಯಾ ತೇಲುತಿದೆ
ಬದುಕೇ ಹುಣ್ಣಿಮೆಯಾಗುತಿದೆ
ಕರೆಯುವ ಕೊಳಲಿನ
ನಲಿಯುವ ಗೆಜ್ಜೆಯ
ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ
ಹಾಡುವ ಮುರಳಿಯ ಕುಣಿಯುವ
ಗೆಜ್ಜೆಯ ಎದೆಯಲಿ ಒಂದೇ ರಾಗ
ಅದು ಆನಂದ ಭೈರವಿ ರಾಗ

Leave a Reply

Your email address will not be published. Required fields are marked *