ಸಂಕೋಚವ ಬಿಡು – Sankochava Bidu SOng Lyrics in Kannada – Samayada gombe Kannada Movie Songs Lyrics

ಚಿತ್ರ: ಸಮಯದ ಗೊಂಬೆ
ಗಾಯಕರು: ಡಾ.ರಾಜ್ ಕುಮಾರ್ ಮತ್ತು ಎಸ್.ಜಾನಕಿ
ಸಂಗೀತ : ಎಂ.ರಂಗರಾವ್
ಸಾಹಿತ್ಯ: ಚಿ.ಉದಯಶಂಕರ್

ಸಂಕೋಚವ ಬಿಡು ಗೆಳತಿಯೆ
ನಿನ್ನಾಸೆಗಳೆಲ್ಲವನು
ಹೇಳು ನೀ ನನಗೆ
ಈಗಲೇ ಎಲ್ಲವ
ನನ್ನಾಣೆ ಪೂರೈಸುವೆ
ಹೆಣ್ಣಲ್ಲವೆ ನಾನು ಗೆಳೆಯನೆ
ನೂರಾಸೆಯು ಇರದೇನು
ಹೇಳು ನೀ ನನಗೆ
ಮದುವೆಯ ಬಯಕೆಯು
ನನ್ನಲ್ಲಿ ಬರದೇನು
♫♫♫♫♫♫♫♫♫♫♫♫

ಕಣ್ಣಲಿ ಹೀಗೇತಕೆ
ಏನು
ತೀರದ ಬಾಯಾರಿಕೆ
ಅಹ್ಹಹಾ
ಕೆನ್ನೆಯು ಕೆಂಪೇತಕೆ
ಚೆಂದುಟಿ ಮಿಂಚೇತಕೆ
ಹೇಳೆಯಾ ಹೆಣ್ಣೇ…..
ನನ್ನಾ ಕಣ್ತುಂಬ ತುಂಬಿ ರೂಪ
ಏನೋ ಆನಂದವು
ಹಹ್ಹಾ
ನನ್ನಾ ಕಣ್ತುಂಬ ತುಂಬಿ ರೂಪ
ಏನೋ ಆನಂದವು
ಎದೆಯನು ತುಂಬಲು
ಮೈಯೆಲ್ಲ ಹೂವಾಗಿದೆ
ಹಾಯ್
ಹೆಣ್ಣಲ್ಲವೆ ನಾನು ಗೆಳೆಯನೆ
ನೂರಾಸೆಯು ಇರದೇನು
ಹೇಳು ನೀ ನನಗೆ
ಮದುವೆಯ ಬಯಕೆಯು
ನನ್ನಲ್ಲಿ ಬರದೇನು
♫♫♫♫♫♫♫♫♫♫♫♫

ಲಾಲಾಲಲಲಲಾ
ಲಾಲಾಲಲಲಲಾ
ಲಾ ಲಾ ಲಾ
ಲಾಲಾಲಲಲಲಾ
ಲಾಲಾಲಲಲಲಾ
ಲಾ ಲಾ ಲಾ
ಸಂಜೆಯ ರಂಗಿಗೆ
ಹಾ
ಹಕ್ಕಿಯ ಹಾರಾಟಕೆ
ಹೋ…. ಹೋ
ತಣ್ಣನೆ ತಂಗಾಳಿಗೆ
ಹ್ಹ ಹ್ಹ

ಹೂಗಳ ಕಂಪಿಗೆ
ಸೋತೆನು ನಾನು….
ನಿನ್ನಾ ಸ್ನೇಹ
ನಿನ್ನಾ ಮೋಹ
ತಂದಾ ಸಂತೋಷವು
ನಿನ್ನಾ ಸ್ನೇಹ
ನಿನ್ನಾ ಮೋಹ
ತಂದಾ ಸಂತೋಷವು
ಜೊತೆಯಲೇ ಇರುವೆನು
ಒಂದಾಗಿ ಎಂದೆಂದಿಗೂ
ಸಂಕೋಚವ ಬಿಡು ಗೆಳತಿಯೆ
ನಿನ್ನಾಸೆಗಳೆಲ್ಲವನು
ಹೇಳು ನೀ ನನಗೆ
ಹ್ಞುಂ ಹ್ಞಂ
ಈಗಲೇ ಎಲ್ಲವ
ನನ್ನಾಣೆ ಪೂರೈಸುವೆ….
ಹೆಣ್ಣಲ್ಲವೆ ನಾನು
ಹಾಂ
ಗೆಳೆಯನೆ
ಹ್ಞಂ ಹ್ಞಂ
ನೂರಾಸೆಯು ಇರದೇನು
ಹೋ….ಹೋ
ಹೇಳು ನೀ ನನಗೆ
ಹಾ
ಮದುವೆಯ

ಬಯಕೆಯು
..
ನನ್ನಲ್ಲಿ ಬರದೇನು
ಲ್ಲಲ್ಲಲಲ ಲಾ ಲಾ
ಲಾ
ಲಾ ಲಾ ಲಾ….
ಲಾ .. ಲಾ ಲಲ ಲಾ
ಲಾ
ಲಾ
ಲಾ ಲಾ ಲಾ..ಲಾ ಲಾ

Leave a Reply

Your email address will not be published. Required fields are marked *