ಮುಗಿಲ ಮಾರಿಗೆ – Mugila Maarige Song Lyrics in kannada – C. Ashwath, Sangeetha Katti, Da Ra Bendre – Bhavageethe Lyrics

Song: Mugila Maarige
Program: Mumbaiyiyalli C Aswath – Live Program
Singer: Sangeetha Katti
Music: C Ashwath
Lyricist: Da Ra Bendre
Music Label : Lahari Music


ಮುಗಿಲ ಮಾರಿಗೆ ರಾಗರತಿಯ……….
ಮುಗಿಲ ಮಾರಿಗೆ ರಾಗರತಿಯ…. ನಂಜ ಏರಿತ್ತ
ಆಗ ಸಂಜೆ ಆಗಿತ್ತ, ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ…
ಗಾಳಿಗೆ ಮೇಲಕ್ಕೆದ್ದಿತ್ತ, ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯ…. ನಂಜ ಏರಿತ್ತ
ಆಗ ಸಂಜೆ ಆಗಿತ್ತ, ಆಗ ಸಂಜೆ ಆಗಿತ್ತ
ಬಿದಿಗಿ ಚಂದ್ರನ ಚೊಗಚೀ ನಗಿ ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚೀ ನಗಿ ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹೆರಳಿನ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ
ಮುಗಿಲ ಮಾರಿಗೆ ರಾಗರತಿಯ…. ನಂಜ ಏರಿತ್ತ
ಆಗ ಸಂಜೆ ಆಗಿತ್ತ, ಆಗ ಸಂಜೆ ಆಗಿತ್ತ
ಬೊಗಸಿಗಣ್ಣಿನ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಬೊಗಸಿಗಣ್ಣಿನ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಚ್ಚಿಹಾಂಗ ಭಾವಿ ಹಾದಿ ಕಾಲಾಗ ಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ
ಮುಗಿಲ ಮಾರಿಗೆ ರಾಗರತಿಯ…. ನಂಜ ಏರಿತ್ತ
ಆಗ ಸಂಜೆ ಆಗಿತ್ತ, ಆಗ ಸಂಜೆ ಆಗಿತ್ತ
ಮಳ್ಳಗಾಳಿ ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ
ಮಳ್ಳಗಾಳಿ ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ
ಮುಗಿಲ ಮಾರಿಗೆ ರಾಗರತಿಯ…. ನಂಜ ಏರಿತ್ತ
ಆಗ ಸಂಜೆ ಆಗಿತ್ತ, ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ…
ಗಾಳಿಗೆ ಮೇಲಕ್ಕೆದ್ದಿತ್ತ, ಗಾಳಿಗೆ ಮೇಲಕ್ಕೆದ್ದಿತ್ತ

Leave a Reply

Your email address will not be published. Required fields are marked *