ಚಿತ್ರ: ಮುದುಡಿದ ತಾವರೆ ಅರಳಿತು
ಗಾಯಕರು: ಎಸ್.ಪಿ. ಬಿ
ಸಂಗೀತ : ಎಂ.ರಂಗರಾವ್
ಸಾಹಿತ್ಯ: ದೊಡ್ಡರಂಗೇಗೌಡ
ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ
ಆ..ಆಆಹಹಾಹಾ
ಹಹಾಹಾ ಆಆಹಹಾಹಾ
ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ
♫♫♫♫♫♫♫♫♫♫♫♫
ಹಸಿರಾದ ಪ್ರೀತಿಯ ಕಂಡು
ಉಸಿರಾಗ ಬಂದೆನು ನಾನು
ಹಸಿರಾದ ಪ್ರೀತಿಯ ಕಂಡು
ಉಸಿರಾಗ ಬಂದೆನು ನಾನು
ಸಸಿಯಾದ ಸ್ನೇಹ ಮೋಹ ಬಲು
ಬೆಳೆದು ನಿಂತಿರಲು
ಓಡಿ ಬಂದೆ ಬಳಿಗೆ
ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ
ಆ..ಆಹ ಹಹಹಾ
ಹಹಾ ಆಆ ಆಆ ಹಹಹಾ
♫♫♫♫♫♫♫♫♫♫♫♫
ಹೊಸದಾದ ಆಸೆಯ ತೋರಿ
ಶಶಿಯಂತೆ ಬೆಳಗುವೆ ನೀನು
ಹೊಸದಾದ ಆಸೆಯ ತೋರಿ
ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ
ತೇಲು ನನ್ನ ಜೊತೆಗೆ
ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ
ಆಆಹ ಹಹಹಾ
ಹಹಾ ಆಆ ಆಆ ಹಹಹಾ
ಲಾ ಲಾಲಲ ಲಲ ಲಾ
ಹೂಂಹೂಂಹೂಂಹೂಂಹೂಂಹೂಂ..
ಹೂಂಹೂಂಹೂಂ