ಚಿತ್ರ: ಅವಳೇ ನನ್ನ ಹೆಂಡ್ತಿ
ಗಾಯಕರು: ಎಸ್.ಪಿ.ಬಾಲು
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ಟ್ರು ಸಾಲಲ್ಲ
ಬೀಗತನ ಮುಗ್ಯಲ್ಲ
ತಾಳಿ ಇನ್ನು ಕಟ್ಟಿಲ್ಲ
ಮಾತುಕಥೆ ಮುಗ್ದಿಲ್ಲ
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆ ಅಂತೂ ಇನ್ನು ಕೂಡಿ ಬಂದಿಲ್ಲ
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು…
♫♫♫♫♫♫♫♫♫♫♫
ಹೆಣ್ಣು ಕೊಟ್ಟ ಮಾವನು
ಕಣ್ಣು ಕೊಟ್ಟ ದೇವನು
ಹೆಣ್ಣು ಹೆತ್ತ ತಪ್ಪಿಗೆ
ಕಾಲಿಗೆ ಬಿದ್ಧರೋ…ಓಓಓಓಓ
ಸಾಲ ಸೂಲ ಮಾಡಿಯೋ
ಚಕ್ರ ಬಡ್ಡಿ ನೀಡಿಯೋ
ದುಡ್ಡು ತಂದು ಒಟ್ಟಿಗೆ
ಗಂಡಿಗೆ ಕೊಟ್ಟರೋ…..
ಸೂಟು ಬೂಟು ಬೇಕಂತಾನೆ
ವಾಚು ಉಂಗ್ರ ಎಲ್ಲಂತಾನೆ
ಸ್ಕೂಟ್ರು ತಂದು ನಿಲ್ಸನ್ತಾನೇ
ಮದುವೆ ಆಮೇಲಂತಾನೆ
ಮಾತುಕಥೆ ಇನ್ನೂ ಮುಗ್ದಿಲ್ಲಾ….
ಓಓಓ..ಓಓಓ
ಹೆಣ್ಣಿಗೊಂದು ತಾಳಿ ಕಟ್ಟೋ
ಪುಣ್ಯವಂತ ಇನ್ನೂ ಕೂಡಿಬಂದಿಲ್ಲ
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು…..
♫♫♫♫♫♫♫♫♫♫♫
ನಿಂತು ಹೋದ ಮದುವೆಗೆ
ಬಂದು ಸೇರಿದವರಿಗೆ
ಮದುವೆ ಊಟದಡಿಗೆ
ಸಂಡಿಗೆ ಚಿಂತೆಯೋ…ಓಓಓ
ದೇಶದಲ್ಲಿ ತಿನ್ನಲೂ ಅನ್ನವಿಲ್ಲದಿರಲು
ದಂಡ ಪಿಂಡಗಳಿಗೆ
ಅನ್ನದ ಸಂತೆಯೋ…..
ಬಾಳೆದಿಂಡು ಬಾಗೇ ಹೋಯ್ತು
ತೋರಣವು ಒಣಗೇ ಹೋಯ್ತು
ತೆಂಗಿನಕಾಯಿ ನಿದ್ದೆ ಮಾಡ್ತು
ತಾಳಿಯಂತೂ ಯೊಚ್ನೇಗ್ ಬಿತ್ತು
ಅಕ್ಷತೆಗೆ ಕಾಲ ಬಂದಿಲ್ಲಾ ….
ಓಓಓ..ಓಓಓ…..
ಹೆಣ್ಣಿಗೊಂದು ತಾಳಿ ಕಟ್ಟೋ
ಯೋಗವಂತೂ ಇಲ್ಲವೇ ಇಲ್ಲ
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ಟ್ರು ಸಾಲಲ್ಲ
ಬೀಗತನ ಮುಗ್ಯಲ್ಲ
ತಾಳಿ ಇನ್ನು ಕಟ್ಟಿಲ್ಲ
ಮಾತುಕಥೆ ಮುಗ್ದಿಲ್ಲ
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆ ಅಂತೂ ಇನ್ನು ಕೂಡಿ ಬಂದಿಲ್ಲ