Song: Mathadu Nee
Album/Movie: Tarak
Artist Name: Darshan, Sruthi Hariharan, Shanvi Srivastava
Singer: Armaan Malik & Shreya Ghoshal
Music Director: Arjun Janya
Lyricist: Jayanth Kaikini
Music Label: Lahari Music
ಹುಹುಹುಹುಹೂಂಹೂಂ
ಹೆಹೆಹೆಹೆಹೇಹೇ…
ಓ ಓ ಓ ಓ ಓ ಹೋ
ಮಾತಾಡು ನೀ..
ಹೃದಯದ ಮೌನ
ಹೃದಯಕೆ ಸೀದ
ತಲುಪುವ ಹಾಗೆ
ಮಾತಾಡು ನೀ…
ಏನಾದರು ಮಾತಾಡು ನೀ…
♫♫♫♫♫♫♫♫♫♫♫♫
ದೂರವೆ ನಿಂತು
ಪ್ರೋತ್ಸಾಹ ನೀಡೋದು
ನೀನ್ನ ಕಲೆಗಾರಿಕೆ
ಕಾಣದಂತೇನೆ ಕಾದಿಟ್ಟ ಈ ಮೋಹ
ಬಂತು ಹೊರಗೇತಕೆ
ಮಿನು ಮಿನುಗಿದೆ ಕಣ್ಣುಗಳಲ್ಲಿ
ಸವಿಗನಸಿನ ಠೇವಣಿ
ಹೊಸ ಹುರುಪಲಿ ಬೀಸುತಿರುವ
ಗಾಳಿಯೊಡನೆ ಹೂವಿನಂತೆ
ಮಾತಾಡು ನೀ…
ಹೇಗಾದರೂ… ಮಾತಾಡು ನೀ..
♫♫♫♫♫♫♫♫♫♫♫♫
ಕಂಡ ಮಾತ್ರಕ್ಕೆ
ನಾ ಸೋಲಬೇಕಿಲ್ಲ
ಚೂರು ಪುಸಲಾಯಿಸು
ಆಡದೆ ಇದ್ದ ಪ್ರೀತಿನೆ ಬಲು ಚಂದ
ಧಾಟಿ ಬದಲಾಯಿಸು
ಉಸಿರಿನ ಒಳ ಬೀದಿಗಳಲಿ
ಪಿಸು ನುಡಿಗಳ ಸಂದಣಿ
ನಸು ಬೆಳಕಲಿ ನೀಯುತಿರುವ
ತೀರದೊಡನೆ ತೆರೆಗಳಂತೆ
ಮಾತಾಡು ನೀ..
ಇನ್ನಾದರು… ಮಾತಾಡು ನೀ..
ಹೃದಯದ ಮೌನ
ಹೃದಯಕೆ ಸೀದ
ತಲುಪುವ ಹಾಗೆ
ಮಾತಾಡು ನೀ…
ಏನಾದರು ಮಾತಾಡು ನೀ…