ಚಿತ್ರ: ಮುಯ್ಯಿಗೆ ಮುಯ್ಯಿ
ಸಂಗೀತ : ಸತ್ಯಂ
ಸಾಹಿತ್ಯ: ವಿಜಯನಾರಸಿಂಹ
ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ
ಬಿಂಕ ತೋರಿ ಬೆಳಗೋ ಮುಂಜಾನೇ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ
ಸರಸ ಆಡೋ ಹರೆಯಾ ಇಂದೇನೇ
ಹೊಯ್ ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ
ಬಿಂಕ ತೋರಿ ಬೆಳಗೋ ಮುಂಜಾನೇ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ
ಸರಸ ಆಡೋ ಹರೆಯಾ ಇಂದೇನೇ
ಓ………ಹೋಹೊಹೋ…
ಅಹಾಹಾ…………..
ಆಆಆ…
♫♫♫♫♫♫♫♫♫♫♫♫
ಕಣ್ಣು ಕಣ್ಣು ಬೇಟೆ ಆಡಿ
ಹೆಣ್ಣು ಗಂಡು ಕೂಟ ಕೂಡಿ
ಬಲೆ ಬೀಸಿ ಬಂತು ಯೌವ್ವನಾ…
ಭಲೇ ಎಲ್ಲಾ ಮರೆಯೋ ಜೀವನಾ
ಆಆ ಆಆ ಆಆ……..ಆಆಆ
ಅಂದ ಚಂದ ತಂದ ಹೂವೂ
ಎಂದು ಕಾಣದಂತೆ ನೋವೂ
ಇಡು ಆಣೆ ನೀನೂ ಬೇಗನೇ…
ಜೊತೆ ಕೂಡಿ ಹೀರು ಮಧುವನೇ
ಹೇ…
ಹ್ಹಾ…
ಹೋ
ಹ್ಹಾ..
ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ
ಬಿಂಕ ತೋರಿ ಬೆಳಗೋ ಮುಂಜಾನೇ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ
ಸರಸ ಆಡೋ ಹರೆಯಾ ಇಂದೇನೇ
ಓ……… ಹೋಹೊಹೋ…
ಓಹೋಹೊಹೋ…
ಅಹ್ಹಹಾ……
♫♫♫♫♫♫♫♫♫♫♫♫
ಹಾರಿ ಹಾರಿ ಬಂತು ಹಕ್ಕಿ
ನಕ್ಕು ನಕ್ಕು ನಲಿವ ಸೊಕ್ಕಿ
ಇಂಥ ಜೋಡಿ ಎಲ್ಲೂ ಸೇರದೂ
ಆಹಾ ಹಾಆಆ
ಬಾಳಿನಲ್ಲಿ ನೋವೇ ಬಾರದು
ಆಆ ಆಆ ಆಆ ಆ..
ಒಂದೇ ತಂತಿ ಮೀಟಿದಂತೆ
ಚೈತ್ರ ಚಿಗುರು ಮೂಡಿದಂತೆ
ಮನಸೋತು ಬೆಸುಗೆ ಹಾಕಿದೆ
ಆಆಆ ಆಆ
ಸವಿಬಾಳು ನಮ್ಮಾ ಮುಂದಿದೆ
ಹೇ…
ಹ್ಹಾ…
ಓ
ಹ್ಹಾ..
ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ
ಬಿಂಕ ತೋರಿ ಬೆಳಗೋ ಮುಂಜಾನೇ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ
ಸರಸ ಆಡೋ ಹರೆಯಾ ಇಂದೇನೇ
♫♫♫♫♫♫♫♫♫♫♫
ಝಲ್ಲೂ ಝಲ್ಲೂ ಎಂದು ಗೆಜ್ಜೆ
ನಾಟ್ಯವಾಡುವಂತ ಹೆಜ್ಜೇ
ಸಿರಿ ತಂತು ನನ್ನೀ ಪಾಲಿಗೇ…
ಓ ಓಓ ಓಓ
ಬಳಿ ಬಂತು ನನ್ನೀ ಬಾಳಿಗೆ
ಓಹೋಹೊಹೋ..
ರಂಗು ರಂಗಿನಾಟದಲ್ಲಿ
ಸಂಗ ಸೇರಿ ಹೋದೆ ಇಲ್ಲಿ
ತೊರೆಬೇಡ ನನ್ನೀ ಸ್ನೇಹವಾ…
ಸುಖದಿಂದ ಒಂದೇ ಆಗುವ
ಓ
ಹ್ಹಾ…
ಓ
ಹ್ಹಾ..
ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ
ಬಿಂಕ ತೋರಿ ಬೆಳಗೋ ಮುಂಜಾನೇ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ
ಸರಸ ಆಡೋ ಹರೆಯಾ ಇಂದೇನೇ
ಹೊಯ್ ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ
ಬಿಂಕ ತೋರಿ
ಬೆಳಗೋ ಮುಂಜಾನೇ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ
ಸರಸ ಆಡೋ
ಹರೆಯಾ ಇಂದೇನೇ