ಬಾ ಮಳೆಯೇ ಬಾ – Baa maleye baa Song Lyrics in Kannada – C Ashwath

Song: Baa maleye baa





Artist: C Ashwath
Album: GanaSudhe


ಬಾ ಮಳೆಯೇ ಬಾ
ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ನಲ್ಲೆ ಬರಲಾಗದಂತೆ
ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ಹಿಂತಿರುಗಿ ಹೋಗದಂತೆ
ನಲ್ಲೆ ಹಿಂತಿರುಗಿ ಹೋಗ ದಂತೆ
ಬಾ ಮಳೆಯೇ ಬಾ
ಬಾ ಮಳೆಯೇ ಬಾ
ಬಾ
ಓಡು ಕಾಲವೇ ಓಡು
ಓಡು ಕಾಲವೇ ಓಡು
ಓಡು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ
ಅವಳಿಲ್ಲಿ ಬಂದೊಡನೆ ನಿಲ್ಲು ಕಾಲವೇ ನಿಲ್ಲು
ನಿಲ್ಲು ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ
ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ
ಬಾ ಮಳೆಯೇ ಬಾ
ಬೀರು ದೀಪವೇ ಬೀರು
ಬೀರು ದೀಪವೇ ಬೀರು ನಿನ್ನ ಹೊಂಬಳಕಲ್ಲಿ
ನೋಡುವೆನು ನಲ್ಲೆ ರೂಪ
ಬೀರು ದೀಪವೇ ಬೀರು ನಿನ್ನ ಹೊಂಬಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು ಬೇಗನೆ ಆರು
ಆರು ಬೇಗನೆ ಆರು ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ
ಬಾ ಮಳೆಯೇ ಬಾ
ಬಾ ಮಳೆಯೇ ಬಾ
ಬಾ
ಹೋಗು ನಿದ್ದೆಯೇ ಹೋಗು
ಹೋಗು ನಿದ್ದೆಯೇ ಹೋಗು ನಿನಗಿಲ್ಲಿ ಎಡೆಯಿಲ್ಲ
ಪ್ರೇಮಿಗಳ ಸೀಮೆಯಲ್ಲಿ
ಪ್ರೇಮಿಗಳ ಸೀಮೆಯಲ್ಲಿ
ನಾವೀಗ ಅನಿಮಿಷರು
ನಾವೀಗ ಅನಿಮಿಷರು ನಮ್ಮ ಮಿಲನ
ನಾವೀಗ ಅನಿಮಿಷರು ನಮ್ಮ ಮಿಲನ
ಗಂಧರ್ವ ವೈಭೋಗದಂತೆ
ಗಂಧರ್ವ ವೈಭೋಗದಂತೆ
ಮಿಲನ ಗಂಧರ್ವ ವೈಭೋಗದಂತೆ
ಬಾ ಮಳೆಯೇ ಬಾ
ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ನಲ್ಲೆ ಬರಲಾಗದಂತೆ
ನಲ್ಲೆ ಬರಲಾಗದಂತೆ

Ba maleye ba Song Lyrics
Baa maleye baa Lyrics in Kannada

Leave a Reply

Your email address will not be published. Required fields are marked *