ಕುರುಡನಾದವಗೆ ಕಣ್ಣು ಬಂದಂತೆ
ಬಡವನಾದವಗೆ ಸಿರಿಯು ಒಲಿದಂತೆ
ಬಂದೆಯಾ ಗುರುರಾಯ
ದಯ ಮಾಡಿಸು ಮಹನೀಯ
ಬಂದೆಯಾ ಗುರುರಾಯ
ದಯ ಮಾಡಿಸು ಮಹನೀಯ
ಬಂದೆಯಾ ಗುರುರಾಯ
♬♬♬♬♬♬♬♬♬♬♬♬♬♬♬♬
ಮಾತು ಬಾರದೆ ಕಂಠ ಬಿಗಿದಿದೆ
ಕಣ್ಣ ತುಂಬಾ ಕಣ್ಣೀರು ತುಂಬಿದೆ
ಮಾತು ಬಾರದೆ ಕಂಠ ಬಿಗಿದಿದೆ
ಕಣ್ಣ ತುಂಬಾ ಕಣ್ಣೀರು ತುಂಬಿದೆ
ನಿನ್ನ ಕಂಡ ಆನಂದದಿಂದ
ನನಗೇನು ತೋಚದ ಹಾಗೆ ಆಗಿದೆ
ಬಂದೆಯಾ ಗುರುರಾಯ
ದಯ ಮಾಡಿಸು ಮಹನೀಯ
ಬಂದೆಯಾ ಗುರುರಾಯ
♬♬♬♬♬♬♬♬♬♬♬♬♬♬♬♬
ಮಣೆಯ ಹಾಕಲೆ ಚಾಪೆ ಹಾಸಲೆ
ಪಾದ ತೊಳೆಯಲೇ ಪೂಜೆ ಮಾಡಲೇ
ಮಣೆಯ ಹಾಕಲೆ ಚಾಪೆ ಹಾಸಲೆ
ಪಾದ ತೊಳೆಯಲೇ ಪೂಜೆ ಮಾಡಲೇ
ತುಂಬಿ ಬಂದ ಆವೇಶದಿಂದ
ಈ ಪಾದ ಕಮಲದಲಿ
ಬೃಂಗ ಆಗಲೇ
ಬಂದೆಯಾ ಗುರುರಾಯ
ದಯ ಮಾಡಿಸು ಮಹನೀಯ
ಬಂದೆಯಾ ಗುರುರಾಯ
♬♬♬♬♬♬♬♬♬♬♬♬♬♬♬♬
ವೇದ ಶಾಸ್ತ್ರವ ಓದಿ ತಿಳಿಯೆನು
ದೇವ ಭಾಷೆಯ ಗಂಧವರಿಯೆನು
ವೇದ ಶಾಸ್ತ್ರವ ಓದಿ ತಿಳಿಯೆನು
ದೇವ ಭಾಷೆಯ ಗಂಧವರಿಯೆನು
ಏನು ಕಂಡೆಯೋ ಮೂಢನಲ್ಲಿ
ಈ ಕರುಣೆ ಏತಕೋ ಸ್ವಾಮಿ ಕಾಣೆನು
ಬಂದೆಯಾ ಗುರುರಾಯ
ದಯ ಮಾಡಿಸು ಮಹನೀಯ
ಬಂದೆಯಾ ಗುರುರಾಯ
ಸಿರಿಯ ಕೇಳೆನು ವರವ ಬೇಡೆನು
ಯಾರ ಕುರಿತು ನಾನೇನು ಹೇಳೆನು
ಸಿರಿಯ ಕೇಳೆನು ವರವ ಬೇಡೆನು
ಯಾರ ಕುರಿತು ನಾನೇನು ಹೇಳೆನು
ನಿನ್ನ ಪಾದುಕೆಯ ಶಿರದಿ ಹೊತ್ತು
ಕ್ಷಣ ಕಾಲ ನಿಲ್ಲುವ ಭಾಗ್ಯ ಕೊಡುವೆಯಾ
ಕರುಣಿಸು ಗುರುರಾಯ
ದಯ ತೋರಿಸು ಮಹನೀಯ
ಕರುಣಿಸು ಗುರುರಾಯ
ದಯ ತೋರಿಸು ಮಹನೀಯ
ಕರುಣಿಸು ಗುರುರಾಯ