ಚಿತ್ರ: ಸೂತ್ರದಾರ
ಹಾಡು: ನೂರಾರು ನೆನಪಿನ
ಗಾಯನ :ರಾಜಕುಮಾರ್
Actor: Raghavendra Rajkumar
Niveditha Jain
Music: Hamsalekha
Lyrics: Hamsalekha
ಹೇ ಹೇಹೇ ಓಹೋ ಓಹೋ ಹೂಂ
ನೂರಾರು ನೆನಪಿನ
ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು
ಬೆಸುಗೆ ಹಾಕುವ ಹಾಡು ಇದು
ಬಾಳಿನ ಬಾನಿನಲಿ
ಪ್ರೇಮದ ಚಂದಿರ ಸಂಚಾರ
ಆಆಆಆಆ
ಹುಣ್ಣಿಮೆ ರಾಶಿಯಲಿ
ನಮ್ಮದು ಸುಂದರ ಸಂಸಾರ
ಹೇ ಹೇಹೇ ಏಹೇ ಏಹೇ ಹೂಂ
ನೂರಾರು ನೆನಪಿನ
ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು
ಬೆಸುಗೆ ಹಾಕುವ ಹಾಡು ಇದು
♬♬♬♬♬♬♬♬♬♬♬♬
ಬೆಳ್ಮುಗಿಲೆ
ಕಾರ್ಮುಗಿಲೇ
ಏನೇ ಬರಲಿ ಏನೇ ತರಲಿ
ಈ ಹಾಡಿನ ಗುಂಗಲ್ಲಿರು
ಜಾರಿದರೂ
ಜಯಿಸಿದರೂ
ತಂದೆ ತಾಯಿ ಹರಸಿ ತಂದ
ಈ ಹಾಡಿನ ಹಂಗಲ್ಲಿರು
ಒಂದೊಂದು ಸ್ವರದಲೂ ತುಂಬಿದೆ
ಪ್ರೀತಿಯ ಝೇಂಕಾರ
ಈಈ ರಾಗದ ಅಲೆಯಲಿ
ನಮ್ಮದು ಸುಂದರ ಸಂಸಾರ
ಹೇ ಹೇಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ
ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ
ಹಾಕುವ ಹಾಡು ಇದು
♬♬♬♬♬♬♬♬♬♬♬♬
ಎಲ್ಲರಿಗೂ
ಎಲ್ಲದಕೂ
ಸೂತ್ರಧಾರ ಸೂತ್ರಧಾರ
ಆ ದೇವರು ಅಲ್ಲಿರುವ
ಕುಣಿಸಿದರೆ
ರಂಜಿಸುವ
ಪಾತ್ರಧಾರ ಪಾತ್ರಧಾರ
ಈ ಬೊಂಬೆಯೂ ಇಲ್ಲಿರುವ
ಪ್ರೀತಿಯ ಪಾತ್ರದಲಿ
ತುಂಬಿದೆ ಜೀವನ ಸಂಚಾರ
ಈ ಆನಂದ ಲಹರಿಯಲಿ
ನಮ್ಮದು ಸುಂದರ ಸಂಸಾರ
ಹೇ ಹೇಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ
ತುಂಬಿದ ಹಾಡು ಇದು
ಏಳೇಳೂ ಜನುಮಕು
ಬೆಸುಗೆ ಹಾಕುವ ಹಾಡು ಇದು