ನೀನಿಟ್ಟ ವರವಲ್ಲವೇ – Neenitta Varavallave Song Lyrics


Jeevana Darshana

Sri Dingaleshwara Pravachana

  

ನೀನಿಟ್ಟ
ವರವಲ್ಲವೇ

ಓ ಸ್ವಾಮಿ
ಈ ಹೂವು ಹಣ್ಣುಗಳು

ನೀನಿಟ್ಟ
ವರವಲ್ಲವೇ

ಓ ಸ್ವಾಮಿ
ಈ ನಮ್ಮ ಕಣ್ಣುಗಳು

ಈ ಭೂಮಿ
ಈ ಬಾನು

ಈ ದೇಹ
ಈ ಪ್ರಾಣ

ಎಲ್ಲಾವು
ನಿನದಲ್ಲವೇ..

ನೀನಿಟ್ಟ
ವರವಲ್ಲವೇ

ಓ ಸ್ವಾಮಿ
ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಪಂಪಾ
ನದಿಯ ನೀರು

ಅಲೆಯಲ್ಲ
ನಿನ್ನದು

ತಂಪಾಗಿ
ಸುರಿಯುವ

ಮಳೆಯಲ್ಲ
ನಿನ್ನದು

ಪಂಪಾ
ನದಿಯ ನೀರು

ಅಲೆಯಲ್ಲ
ನಿನ್ನದು

ತಂಪಾಗಿ
ಸುರಿಯುವ

ಮಳೆಯಲ್ಲ
ನಿನ್ನದು

ಈ ಗಾಳಿ
ಈ ನೀರು

ಆ ಮೋಡ
ಆ ಮುಗಿಲು

ಎಲ್ಲಾವೂ
ನಿನದಲ್ಲವೇ

ನೀನಿಟ್ಟ
ವರವಲ್ಲವೇ

ಓ ಸ್ವಾಮಿ
ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಗಿಳಿಯ
ಕೋಗಿಲೆಗಳ

ಸ್ವರವೆಲ್ಲಾ
ನಿನ್ನದು

ಪಂಚವಾಧ್ಯ
ಮೇಳ

ಲಯವೆಲ್ಲಾ
ನಿನ್ನದು

ಗಿಳಿಯ
ಕೋಗಿಲೆಗಳ

ಸ್ವರವೆಲ್ಲಾ
ನಿನ್ನದು

ಪಂಚವಾಧ್ಯ
ಮೇಳ

ಲಯವೆಲ್ಲಾ
ನಿನ್ನದು

ಈ ರಾಗ
ಈ ತಾಳ

ಈ ಹಾಡು
ಈ ಇಂಪು

ಎಲ್ಲಾವೂ
ನಿನದಲ್ಲವೇ

ನೀನಿಟ್ಟ
ವರವಲ್ಲವೇ

ಓ ಸ್ವಾಮಿ
ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಮಿನಗುವ ಚುಕ್ಕೆಯ

ಹೊಳಪೆಲ್ಲಾ
ನಿನ್ನದು

ಕಾಮನಬಿಲ್ಲಿನ

ಬಣ್ಣವು
ನಿನ್ನದು

ಮಿನಗುವ
ಚುಕ್ಕೆಯ

ಹೊಳಪೆಲ್ಲಾ
ನಿನ್ನದು

ಕಾಮನಬಿಲ್ಲಿನ

ಬಣ್ಣವು
ನಿನ್ನದು

ಆ ಸೂರ್ಯ
ಆ ಚಂದ್ರ

ಈ ರಾತ್ರಿ
ಈ ಹಗಲು

ಎಲ್ಲಾವೂ
ನಿನದಲ್ಲವೇ

ನೀನಿಟ್ಟ
ವರವಲ್ಲವೇ

ಓ ಸ್ವಾಮಿ
ಈ ಹೂವು ಹಣ್ಣುಗಳು

♫♫♫♫♫♫♫♫♫♫♫♫

ಈ ನಮ್ಮ ನರಜನ್ಮ

ನೀಕೊಟ್ಟ ವರವು

ಸರ್ವಾಂಗ ಚೇತನ

ನೀನಿಟ್ಟ ಒಲವು

ಈ ನಮ್ಮ ನರಜನ್ಮ

ನೀಕೊಟ್ಟ ವರವು

ಸರ್ವಾಂಗ ಚೇತನ

ನೀನಿಟ್ಟ ಒಲವು

ಈ ತನವು ಈ ಮನವು

ಈ ಭಕ್ತಿ ಆ ಮುಕ್ತಿ

ಎಲ್ಲಾವೂ
ನಿನದಲ್ಲವೇ

ನೀನಿಟ್ಟ
ವರವಲ್ಲವೇ

ಓ ಸ್ವಾಮಿ
ಈ ಹೂವು ಹಣ್ಣುಗಳು

ಈ ನಮ್ಮ
ಕಣ್ಣುಗಳು

ಈ ನಮ್ಮ
ಕಣ್ಣುಗಳು

Leave a Reply

Your email address will not be published. Required fields are marked *