ಚಿತ್ರ: ಬಡವರ ಬಂಧು
ಹೂ೦… ಹುಹುಹುಹುಹೂಂ
ಹಾ… ಆ ಆ ಆ ಆ ಆ
ಆ ಆ ಆ ಆ ಆ ಆ…
ಆ ಆ ಆ ಆ ಆ ಆ ಆ ಆ
ಹಾ… ಆ ಆ ಆ ಆ ಆ ಆ
ನಿನ್ನ ನುಡಿಯೂ ಹೊನ್ನ ನುಡಿಯು
ಜೇನ ಹನಿಯೂ ಹೃದಯಕೆ
ನನ್ನ ಎದೆಯಾ ವೀಣೆ ತಂತಿಯ
ಮೀಟಿ ಓಡಿದೇ ಏತಕೆ
ನಿನ್ನ ನುಡಿಯೂ ಹೊನ್ನ ನುಡಿಯು
ಜೇನ ಹನಿಯೂ ಹೃದಯಕೆ
♫♫♫♫♫♫♫♫♫♫♫♫
ನಡೆವ ಹಾದಿಗೆ ನಗೆಯ ಹೂವನು
ಚೆಲ್ಲಿದಾಗಲು ಕಾಣದೇ
ನಡೆವ ಹಾದಿಗೆ ನಗೆಯ ಹೂವನು
ಚೆಲ್ಲಿದಾಗಲು ಕಾಣದೇ
ಕಂಗಳಿಂದಲೆ ಪ್ರಣಯ ಕಾವ್ಯವ
ಹಾಡಿದಾಗಲು ಕೇಳದೇ
ನಿನ್ನರಿಯದೇ ಹೋದೆನೂ
ಮನಸ ತಿಳಿಯದೆ ಸೋತೆನೂ
ಕನಸಿನಲ್ಲಿ ಕಂಡ ಹಣ್ಣಿಗೆ
ಆಸೆ ಪಡುವ೦ತಾದೆನೂ
ನಿನ್ನ ನುಡಿಯೂ ಹೊನ್ನ ನುಡಿಯು
ಜೇನ ಹನಿಯೂ ಹೃದಯಕೆ
♫♫♫♫♫♫♫♫♫♫♫♫
ಕಂಡು ಕಾಣದ ಮಿಂಚಿನಂತೆ
ಸುಳಿದು ಓಡಿದೆ ದೂರಕೇ
ಕಂಡು ಕಾಣದ ಮಿಂಚಿನಂತೆ
ಸುಳಿದು ಓಡಿದೆ ದೂರಕೇ
ತಂದು ಬಯಕೆಯ ತುಂಬಿ ನನ್ನಲಿ
ಇಂದು ಕೆಣಕಿದೆ ಏತಕೇ
ನೀನು ಗಗನದ ಕುಸುಮವೂ
ನಾನು ಭೂಮಿಯ ಭ್ರಮರವೂ
ಮಧುವಿನಾಸೆಯು ಸಹಜವಾದರೂ
ಸೇರಲೆಲ್ಲಿದೇ ಹಾದಿಯೂ
ನಿನ್ನ ನುಡಿಯೂ ಹೊನ್ನ ನುಡಿಯು
ಜೇನ ಹನಿಯೂ ಹೃದಯಕೆ
ನನ್ನ ಎದೆಯಾ ವೀಣೆ ತಂತಿಯ
ಮೀಟಿ ಓಡಿದೇ ಏತಕೆ
ನಿನ್ನ ನುಡಿಯೂ ಹೊನ್ನ ನುಡಿಯು
ಜೇನ ಹನಿಯೂ ಹೃದಯಕೆ
ಅಹ ಹಾ ಆ ಆ ಆ….
ಆಹಾ ಆ ಆ ಆ….
ಹಾ.. ಆ ಆ ಆ….