ಚಿತ್ರ: ರಣರಂಗ
ಸಂಗೀತ: ಹಂಸಲೇಖ
ಗಾಯನ: ಎಸ್ ಪಿ ಬಿ, ವಾಣಿ ಜಯರಾಮ್
ನಿನ್ನ ಕಣ್ಣುಗಳು
ಹೆದರೋ ಜಿಂಕೆಗಳು
ಕಣ್ಣ ರೆಪ್ಪೆಗಳು
ಹಾರೋ ಚಿಟ್ಟೆಗಳು
ನಿನ್ನ ಮುಂಗುರುಳು
ಓಡೋ ಮೋಡಗಳು
ಸುರಿಯೆ ಮಳೆಹನಿಯಾಗಿ
ನಿನ್ನ ಅಧರಗಳು
ಬಿರಿದ ಹಣ್ಣುಗಳು
ಸುರಿಯೆ ಮಧುಹನಿಯಾಗಿ
ಓಹೊ ಮದುಮಗಳೇ
ಹೇಳೋ ಮದುಮಗನೇ
ಓಹೊ ಮದುಮಗಳೇ
ಹೇಳೋ ಮದುಮಗನೇ
ನೀನು ಹೆಜ್ಜೆ ಇಟ್ಟಕಡೆ
ಮಧುಮಾಸ ಬಾ ಚೆಲುವೆ
ನಿನ್ನ ಕಣ್ಣುಗಳು
ಹೆದರೋ ಜಿಂಕೆಗಳು
ಕಣ್ಣ ರೆಪ್ಪೆಗಳು
ಹಾರೋ ಚಿಟ್ಟೆಗಳು
♫♫♫♫♫♫♫♫♫♫♫♫♫♫
ಮೀನಿನ ಚಿತ್ತಾರದ ಕಣ್ಣಲಿ ಮತ್ತೇರಿದ
ಆಸೆಯ ಸವಿನೋಟದ ತುದಿಯಲ್ಲಿ
ಕೆಂಪನೆ ದಾಳಿಂಬೆಯ
ಮುತ್ತಿನ ಸಾಲಂತಿಹ
ಬೆಳ್ಳನೆ ನಗುವಲ್ಲಿನ ಬೆಳಕಲ್ಲಿ
ಪ್ರೇಮದ ಕಾರಂಜಿಯ ಚಿಮ್ಮಿಸಿದೆ
ನನ್ನನು ನೀ ಸೆಳೆದೆ
ಪ್ರೀತಿಯ ಸಾಗರದೀ ಮುಳುಗಿಸಿದೆ
ಮತ್ತಲಿ ತೇಲಿಸಿದೆ
ಓಹೊ ಮದುಮಗಳೇ
ಹೇಳೋ ಮದುಮಗನೇ
ಓಹೊ ಮದುಮಗಳೇ ಹೇ
ಹೇಳೋ ಮದುಮಗನೇ ಓ
ನೀನು ಹೆಜ್ಜೆ ಇಟ್ಟಕಡೆ
ಮಧುಮಾಸ ಬಾ ಚೆಲುವೆ
ನಿನ್ನ ಕಣ್ಣುಗಳು
ಲ್ಲಲ್ಲಲ್ಲಲ್ಲಲಾ
ಹೆದರೋ ಜಿಂಕೆಗಳು
ಲ್ಲಲ್ಲಲ್ಲಲ್ಲಲಾ
ಕಣ್ಣ ರೆಪ್ಪೆಗಳು
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹಾರೋ ಚಿಟ್ಟೆಗಳು
ಲಾಲ ಲಲಲಲಲಾ
ಲ್ಲಲ್ಲಲ್ಲಲ್ಲಲಾ
ಲ್ಲಲ್ಲಲ್ಲಲ್ಲಲಾ
ಲ್ಲಲ್ಲಲ್ಲಲ್ಲಲಾ
ಲ್ಲಲ್ಲಲ್ಲಲ್ಲಲಾ
♫♫♫♫♫♫♫♫♫♫♫♫♫♫
ಸಂಜೆಯ ರಂಗೇರಿದ
ಸೂರ್ಯನ ಮುದ್ದಾಡಿದೆ
ಕೋಮಲ ಮೈ ಸುಟ್ಟರೂ ನಾ ಉಳಿದೆ
ಪಡುವಣದವನೂರಿಗೆ
ಹೋಗಲು ಬೆನ್ನೇರಿದೆ
ಬಾನಿನ ಬೀದಿಯಲಿ ದಿನ ಕಳೆದೆ
ಪೂರ್ವದ ನನ್ನೂರಲಿ ಬಂದಿಳಿದೆ
ಕಣ್ಣನು ನಾ ತೆರೆದೆ
ಕನಸಿನ ಈ ಕಥೆಯ ಯೋಚಿಸಿದೆ
ಎದುರಿಗೆ ನೀ ಬಂದೆ
ಓಹೊ ಮದುಮಗನೇ
ಹೇಳೇ ಮದುಮಗಳೇ
ಓಹೊ ಮದುಮಗನೇ ಓ
ಹೇಳೇ ಮದುಮಗಳೇ ಓ
ನೀನು ಹೆಜ್ಜೆ ಇಟ್ಟಕಡೆ
ಮಧುಮಾಸ ಬಾ ಚೆಲುವ
ನಿನ್ನ ಕಣ್ಣುಗಳು
ಲ್ಲಲ್ಲಲ್ಲಲ್ಲಲಾ
ಹೆದರೋ ಜಿಂಕೆಗಳು
ಲ್ಲಲ್ಲಲ್ಲಲ್ಲಲಾ
ಕಣ್ಣ ರೆಪ್ಪೆಗಳು
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹಾರೋ ಚಿಟ್ಟೆಗಳು
ಲಾಲ ಲಲಲಲಲಾ
ನಿನ್ನ ಮುಂಗುರುಳು
ಓಡೋ ಮೋಡಗಳು
ಸುರಿಯೆ ಮಳೆಹನಿಯಾಗಿ
ನಿನ್ನ ಅಧರಗಳು
ಬಿರಿದ ಹಣ್ಣುಗಳು
ಸುರಿಯೆ ಮಧುಹನಿಯಾಗಿ