ನಗೆಯು ಬರುತಿದೆ – Nageyu Baruthide Lyrics – Purandara daasaru – Kaalinga Rao

ಸಾಹಿತ್ಯ: ಪುರಂದರದಾಸರು

ಸಂಗೀತ,ಗಾಯನ : ಕಾಳಿಂಗ ರಾವ್


ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

ಜಗದೊಳಿರುವ
ಮನುಜರೆಲ್ಲ

ಹಗರಣವ
ಮಾಡುವುದ ಕಂಡು

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

 

ಪತಿಯ
ಸೇವೆ ಬಿಟ್ಟು ಪರರ ಪತಿಯ ಕೂಡ ಸರಸವಾಡಿ

ಪತಿಯ
ಸೇವೆ ಬಿಟ್ಟು ಪರರ ಪತಿಯ ಕೂಡ ಸರಸವಾಡಿ

ಸತತ
ಮೈಯ ತೊಳೆದು ಹಲವು ವ್ರತವ ಮಾಳ್ಪ ಸತಿಯ ಕಂಡು

 

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

 

ಪರರ
ವನಿತೆಯೊಲುಮೆಗೊಲಿದು ಹರುಷದಿಂದ ಅವಳ ಬೆರೆದು

ಪರರ
ವನಿತೆಯೊಲುಮೆಗೊಲಿದು ಹರುಷದಿಂದ ಅವಳ ಬೆರೆದು

ಹರಿವ
ನೀರಿನೊಳಗೆ ಮುಳುಗಿ ಬೆರಳ ಎಣಿಸುವವರ ಕಂಡು

 

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

 

ಕಾಮ
ಕ್ರೋಧ ಮನದೊಳಿಟ್ಟು ತಾನು ವಿಷದ ಪುಂಜನಾಗಿ

ಕಾಮ
ಕ್ರೋಧ ಮನದೊಳಿಟ್ಟು ತಾನು ವಿಷದ ಪುಂಜನಾಗಿ

ಸ್ವಾಮಿ
ಪುರಂದರವಿಠಲನಾಮ

ಸ್ವಾಮಿ
ಪುರಂದರವಿಠಲನಾಮ ನೆನೆವ ಮನುಜರನ್ನು ಕಂಡು

 

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

ನಗೆಯು
ಬರುತಿದೆ ಎನಗೆ ನಗೆಯು ಬರುತಿದೆ

 

Nageyu Barutide enage Lyrics

Leave a Reply

Your email address will not be published. Required fields are marked *