ದೇವರು ಬರೆದ ಕಥೆಯಲ್ಲಿ – Devaru Bareda Katheyalli Song Lyrics in Kannada – Neelakanta Kannada Movie – Ravichandran

ಚಿತ್ರ:ನೀಲಕಂಠ

ಸಂಗೀತ:ವಿ ರವಿಚಂದ್ರನ್
ಗಾಯಕರು:ಎಸ್ ಪಿ ಬಿ.ನಂದಿತ
ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
♫♫♫♫♫♫♫♫♫♫♫♫
ನೋವಿಗೆ ಮೊದಲಾ ಆ ಔಷಧಿ
ಅಮ್ಮ ಅನ್ನೋ ಕೂಗೆ
ಕಂದನ ಮೊದಲಾ ಆ ಆಸೆಗೆ
ತಾಯಿ ನಾಂದಿಯಂತೆಯೇ
ಮೊದಲಿಗೆ ಮೊದಲಿಲ್ಲಿ
ಈ ತಾಯಿಯೇ ಮೊದಲಿಲ್ಲಿ..
ಒಂಬತ್ತಾದರೂ ತೊಂಬತ್ತಾದರೂ
ಈ ಪ್ರೀತಿ ಬದಲಾಗದು…
ಗರ್ಭದ ಗುಡಿಯಲಿ ಭಗವಂತ
ತಾನೇ ಕುಳಿತ ಸ್ವಾರ್ಥಿ ಕಣೋ
ತಾಯಿಯು ಗರ್ಭವ ಕಂದನಿಗೆ
ಮೀಸಲು ಇಡುವ ನಿಸ್ವಾರ್ಥಿ ಕಣೋ

♫♫♫♫♫♫♫♫♫♫♫♫
ಕರುಳನೇ ತೊಟ್ಟಿಲಾ ಮಾಡಿ
ಕಂದನನ್ನು ತೂಗುವಳು
ಮನಸನ್ನೇ ಮೆಟ್ಟಿಲ್ಲ ಮಾಡಿ
ಕನಸನು ಜಯಿಸುವಳು
ಕೊನೆಗೆ ಕೊನೆಯಲ್ಲಿ…
ತಾಯಿ ಪ್ರೀತಿಗೆ ಕೊನೆಯಲ್ಲಿ…
ಜೊತೆಗೆ ಇದ್ದರು ಇಲ್ಲದಿದ್ದರೂ
ಈ ಪ್ರೀತಿ ಬದಲಾಗದು…
ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ

Devaru Bareda Katheyalli Song by PK Music


Leave a Reply

Your email address will not be published. Required fields are marked *