ದೇವರಿಗೊಂದು – Devarigondu Kaagada Baredu Lyrics – Bevu Bella Kannada Movie – Jaggesh – Rajesh Krishnan – Hamsalekha

ಚಿತ್ರ : ಬೇವು ಬೆಲ್ಲ
ಸಂಗೀತ & ಸಾಹಿತ್ಯ: ಹಂಸಲೇಖ

ಗಾಯನ : ರಾಜೇಶ್ ಕೃಷ್ಣನ್



ದೇವರಿಗೊಂದು ಕಾಗದ ಬರೆದು

ಭೂಮಿಗೆ ಕರಿಬೇಕು

ದೇವರಿಗೊಂದು ಕಾಗದ ಬರೆದು

ಭೂಮಿಗೆ ಕರಿಬೇಕು

ದೇವರು ಓದೋ ಭಾಷೆಯ ಕಲಿಸೋ

ತಾಯಿಯ ಪಡಿಬೇಕೂ…..

ದೇವರಿಗೊಂದು ಕಾಗದ ಬರೆದು

ಭೂಮಿಗೆ ಕರಿಬೇಕು

♫♫♫♫♫♫♫♫♫♫♫♫

ದೇವರೆ ನೀನು ಇರುವ ವಿಷಯ

ಭೂಮಿಗೆ ನೀನು ಬರದ ಕಥೆಯ

ಅಮ್ಮನು ನನಗೆ ಹೇಳಿದಳು

ಆದರೆ ಅರ್ಧ ಉಳಿಸಿದಳು

ಎಲ್ಲಿದೆಯೋ ನಿನ್ನೂರೂ

ದಾರಿಯ ಹೇಳೋರ್ಯಾರು

ಎಲ್ಲಿದೆಯೋ ನಿನ್ನ ಮನೆ

ಪತ್ತೆಯ ನೀಡುವರ್ಯಾರು

ದೇವರಿಗೊಂದು ಕಾಗದ ಬರೆದು

ಭೂಮಿಗೆ ಕರಿಬೇಕು

ದೇವರು ಓದೋ ಭಾಷೆಯ ಕಲಿಸೋ

ತಾಯಿಯ ಪಡಿಬೇಕು

ದೇವರಿಗೊಂದು ಕಾಗದ ಬರೆದು

ಭೂಮಿಗೆ ಕರಿಬೇಕು

♫♫♫♫♫♫♫♫♫♫♫♫

ಅಮ್ಮನಿಗೊಂದು ಸೊಸೆಯನು ತಂದು

ಪಾದವ ತೊಳೆದು ಪೂಜಿಸಲೆಂದು

ಒಬ್ಬಳ ನಾನು ಪ್ರೀತಿಸಿದೆ

ಸತ್ಯದ ಕಹಿಯ ಯೋಚಿಸದೆ

ಪ್ರೀತಿಸಿದ ಆ ಮಾಯೆ

ಹೇಳಿಯೇ ಹೋದಳು ಅಂದು

ಪೂಜಿಸುವ ಈ ತಾಯಿ ಹೇಳದೇ

ಹೋದಳು ಇಂದು

ದೇವರಿಗೊಂದು ಕಾಗದ ಬರೆದು

ಭೂಮಿಗೆ ಕರಿಬೇಕು

ದೇವರು ಓದೋ ಭಾಷೆಯ ಕಲಿಸೋ

ತಾಯಿಯ ಪಡಿಬೇಕು….


ದೇವರಿಗೊಂದು ಕಾಗದ ಬರೆದು

ಭೂಮಿಗೆ ಕರಿಬೇಕು

Leave a Reply

Your email address will not be published. Required fields are marked *