ದಾಸನಾಗು ವಿಶೇಷನಾಗು – Daasanagu Visheshanagu Lyrics in Kannada

ಗಾಯಕ: ಪುತ್ತೂರು
ನರಸಿಂಹನಾಯಕ್
ರಚನೆ: ಕನಕದಾಸ
ಏಸು ಕಾಯಂಗಳ
ಕಳೆದು
ಎಂಬತ್ನಾಲ್ಕು
ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ
ಶರೀರ
ಏಸು ಕಾಯಂಗಳ
ಕಳೆದು
ಎಂಬತ್ನಾಲ್ಕು
ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ
ಶರೀರ
ತಾನಲ್ಲ ತನ್ನದಲ್ಲ
ತಾನಲ್ಲ ತನ್ನದಲ್ಲ
ಆಸೆ ಥರವಲ್ಲ
ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
♬♬♬♬♬♬♬♬♬♬♬♬♬♬♬♬
ಆಶ ಕ್ಲೇಶ ದೋಷವೆಂಬ
ಅಬ್ಧಿಯೊಳು
ಮುಳುಗಿ ಅವನ
ಪಾಶಕ್ಕೊಳಗಾಗದೆ
ನಿರ್ದೋಷಿಯಾಗೊ
ಸಂತೋಷಿಯಾಗೊ
ಆಶ ಕ್ಲೇಶ ದೋಷವೆಂಬ
ಅಬ್ಧಿಯೊಳು
ಮುಳುಗಿ ಅವನ
ಪಾಶಕ್ಕೊಳಗಾಗದೆ
ನಿರ್ದೋಷಿಯಾಗೊ
ಸಂತೋಷಿಯಾಗೊ
ಕಾಶಿ ವಾರಣಾಸಿ
ಕಂಚಿ
ಕಾಳಹಸ್ತಿ ರಾಮೇಶ್ವರ
ಏಸು ದೇಸ ತಿರುಗಿದರೆ
ಬಾಹೋದೇನೋ ಅಲ್ಲಿ
ಹೋದೇನೋ
ದೋಷ ನಾಶ ಕೃಷ್ಣವೇಣಿ
ಗಂಗೆ ಗೋದಾವರಿ
ಭವ
ನಾಶಿ ತುಂಗಭದ್ರೆ
ಯಮುನೆ
ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು
ಜಪ ತಪ ಹೋಮ
ನೇಮಗಳ
ಏಸು ಬಾರಿ ಮಾಡಿದರು
ಫಲವೇನು  ಈ ಛಲವೇನು
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
♬♬♬♬♬♬♬♬♬♬♬♬♬♬♬♬
ಅಂದಿಗೋ ಇಂದಿಗೋ
ಒಮ್ಮೆ
ಸಿರಿ ಕಮಲೇಶನನ್ನು
ಒಂದು ಬಾರಿಯಾರು
ಹಿಂದ
ನೆನೆಯಲಿಲ್ಲ
ಮನದಣಿಯಲಿಲ್ಲ
ಅಂದಿಗೋ ಇಂದಿಗೋ
ಒಮ್ಮೆ
ಸಿರಿ ಕಮಲೇಶನನ್ನು
ಒಂದು ಬಾರಿಯಾರು
ಹಿಂದ
ನೆನೆಯಲಿಲ್ಲ
ಮನದಣಿಯಲಿಲ್ಲ
ಬಂದು ಬಂದು
ಭ್ರಮೆಗೊಂಡು
ಮಾಯಾಮೋಹಕ್ಕೆ
ಸಿಕ್ಕಿ
ನೊಂದು ಬೆಂದು
ಒಂದರಿಂದ
ಉಳಿಯಲಿಲ್ಲ
ಬಂಧ ಕಳೆಯಲಿಲ್ಲ
ಸಂದೇಹವ ಮಾಡದಿರು
ಅರಿವು ಎಂಬ
ದೀಪವಿಟ್ಟು
ಇಂದು ಕಂಡ್ಯ
ದೇಹದಲ್ಲಿ
ಪಿಂಡಾಂಡ ಹಾಗೆ
ಬ್ರಹ್ಮಾಂಡ
ಇಂದು ಹರಿಯ
ಧ್ಯಾನವನ್ನು
ಮಾಡಿ ವಿವೇಕದಿ
ಮುಕುಂದನಿಂದ
ಮುಕ್ತಿ ಬೇಡು ಕಂಡ್ಯ
ನೀ ನೋಡು ಕಂಡ್ಯ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿ..ಶೇಷನಾಗು
♬♬♬♬♬♬♬♬♬♬♬♬♬♬♬♬
ನೂರು ಬಾರಿ
ಶರಣು ಮಾಡಿ
ನೀರ ಮುಳುಗಲ್ಯಾಕೆ
ಪರ ನಾರಿಯರ
ನೋಟಕೆ
ಗುರಿಯ ಮಾಡಿದಿ
ಮನ ಸೆರೆಯ ಮಾಡಿದಿ
ನೂರು ಬಾರಿ
ಶರಣು ಮಾಡಿ
ನೀರ ಮುಳುಗಲ್ಯಾಕೆ
ಪರ ನಾರಿಯರ
ನೋಟಕೆ
ಗುರಿಯ ಮಾಡಿದಿ
ಮನ ಸೆರೆಯ ಮಾಡಿದಿ
ಸೂರೆಯೊಳು ಸೂರೆ
ತುಂಬಿ
ಮೇಲೆ ಹೂವಿನ
ಹಾರ
ಗೀರು ಗಂಧ ಅಕ್ಷತೆಯ
ಧರಿಸಿದಂತೆ
ನೀ ಮೆರೆಸಿದಂತೆ
ಗಾರುಢಿಯ ಮಾತ
ಬಿಟ್ಟು
ನಾದಬ್ರಹ್ಮನ
ಪಿಡಿದು
ಸಾರಿ ಸೂರಿ
ಮುಕ್ತಿಯನ್ನು
ಶಮನದಿಂದ ಮತ್ತೆ
ಸುಮನದಿಂದ
ನಾರಾಯಣ ಅಚ್ಯುತ
ಅನಂತಾದಿ ಕೇಶವನ….
ಆ ಆ ಆ ಆ ಆ
ಆ ಆ ಆ
ಆಆಆಆ
ನಾರಾಯಣ ಅಚ್ಯುತ
ಅನಂತಾದಿ ಕೇಶವನ
ಸಾರಾಮೃತವನುಂಡು
ಸುಖಿಸೋ
ಲಂಡ ಜೀವವೇ
ಎಲೋ ಭಂಡ ಜೀವವೇ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ಏಸು ಕಾಯಂಗಳ
ಕಳೆದು
ಎಂಬತ್ನಾಲ್ಕು
ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ
ಶರೀರ
ಏಸು ಕಾಯಂಗಳ
ಕಳೆದು
ಎಂಬತ್ನಾಲ್ಕು
ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ
ಶರೀರ
ತಾನಲ್ಲ ತನ್ನದಲ್ಲ
ತಾನಲ್ಲ ತನ್ನದಲ್ಲ
ಆಸೆ ಥರವಲ್ಲ
ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು
ದಾಸನಾಗು ಭವಪಾಶ
ನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವಪಾಶ
ನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವಪಾಶ
ನೀಗು

Dasanaagu Visheshanaagu Karaoke with Scrolling Lyrics

Leave a Reply

Your email address will not be published. Required fields are marked *