ಚಿನ್ನದಂಥ ಅರಮನೆ ಜ್ಯೋತಿ – Chinnadantha Aramane Jyothi Song Lyrics in Kannada – Karanthiveera Sangolli Rayanna

PK-Music

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಗಾಯಕ: ಯೇಸುದಾಸ್
ಸಾಹಿತ್ಯ: ಕೇಶವಾದಿತ್ಯ
ಸಂಗೀತ: ಯಶೋವರ್ಧನ್

ಚಿನ್ನದಂಥ ಅರಮನೆ ಜ್ಯೋತಿ
ಕನ್ನ ಕೊರೆದ ಮನೆಯಾಗೈತಿ
ನಿನ್ನದಂತ ನಿನಗೇನೈತಿ
ನಿನ್ನ ತ್ಯಾಗ ನಲುಗೋಗೈತಿ
ವಿಧಿಯಾಟದಾಗ ವ್ಯಥೆ ತುಂಬಿ
ರಾಯ ಕಥೆಯಾದೆಯಾ ಓಓಓ
ಚಿನ್ನದಂಥ ಅರಮನೆ ಜ್ಯೋತಿ
ಕನ್ನ ಕೊರೆದ ಮನೆಯಾಗೈತಿ
♬♬♬♬♬♬♬♬♬♬

ಕ್ರಾಂತಿಯ ಕಡಲು ಬತ್ತೊಗೈತಿ
ಮೋಸಕೆ ನೀ ಬಲಿಯಾಗಿ
ಮಾತೆಯ ಮಡಿಲು ಬರಿದಾಗೈತಿ
ಕಾಣದೆ ನೀ ತೆರೆಯಾಗಿ
ಭೂಮಿ ಬಂಗಾರ ಗಗನ ಮಂದಾರ
ಏಕೆ ನೀನು ಮರೆಯಾದೆ
ಭಕ್ತಿ ಭಂಡಾರ ಶಕ್ತಿ ಸಿಂಧೂರ
ಏಕೆ ನೀನು ಸೆರೆಯಾದೆ
ನೀನ್ಯಾಕೆ.. ಕಲ್ಲಾದೆ..

ಬೀರಪ್ಪ ಬೆಂದು ಹೋದೆ
ಹಿಂಗ್ಯಾಕೆ.. ದೂರಾದೆ..
ರಾಯಣ್ಣ.. ಮೂಕನಾದೆ ಓಓಓ

ಚಿನ್ನದಂಥ ಅರಮನೆ ಜ್ಯೋತಿ
ಕನ್ನ ಕೊರೆದ ಮನೆಯಾಗೈತಿ
♬♬♬♬♬♬♬♬♬♬

ಸ್ನೇಹದ ಒಡಲು ಸಿಡಿದೋಗೈತಿ
ಕಾಡಿದೆ ನೀ ನೆನಪಾಗಿ
ದ್ರೋಹದ ಸಿಡಿಲು ಸಿಡಿಯಾಡೈತಿ
ಜನಿಸಿದೆ ನೀ.. ಧರೆಗಾಗಿ
ಕ್ರಾಂತಿ ಹೂಂಕಾರ

ನೀತಿ ಝೇಂಕಾರ
ಏಕೆ ನೀನು ನೆರವಾದೆ
ವೀರ ಎದೆಗಾರ ಧೀರ ಗೆಣೆಕಾರ
ಏಕೆ ನೀನು ಬರವಾದೆ
ನೀನ್ಯಾಕೆ ಕಲ್ಲಾದೆ

ಬೀರಪ್ಪ ಬೆಂದು ಹೋದೆ
ಹಿಂಗ್ಯಾಕೆ.. ದೂರಾದೆ..
ರಾಯಣ್ಣ.. ಮೂಕನಾದೆ
ದೇಶಪ್ರೇಮ ಕಿಚ್ಚು ಹಚ್ಚಿ

ಕೆಚ್ಚು ಹೆಚ್ಚಿಸಿ
ಯಾಕೆ ಸುಣ್ಣಾದೆ
ನಾನು ದಂಗಾದೆ
ದೇವಮಾನವ ಯಾಕೀ ಸೋಲು
ಕಟುಕರ ನಂಬಿಕೆ

ದ್ರೋಹಕೆ ಬಲಿಯಾದೆ
ಚಿನ್ನದಂಥ ಅರಮನೆ ಜ್ಯೋತಿ
ಕನ್ನ ಕೊರೆದ ಮನೆಯಾಗೈತಿ
ನಿನ್ನದಂತ ನಿನಗೇನೈತಿ
ನಿನ್ನ ತ್ಯಾಗ ನಲುಗೋಗೈತಿ
ವಿಧಿಯಾಟದಾಗ ವ್ಯಥೆ ತುಂಬಿ..
ರಾಯ ಕಥೆಯಾದೆಯಾ ಓಓಓ
ಚಿನ್ನದಂಥ ಅರಮನೆ ಜ್ಯೋತಿ
ಕನ್ನ ಕೊರೆದ ಮನೆಯಾಗೈತಿ

Leave a Reply

Your email address will not be published. Required fields are marked *