ಕಲ್ಲಾದರೆ ನಾನು – Kallaadare naanu Song Lyrics in Kannada – Simhadriya Simha Kannada Movie

ಚಿತ್ರ: ಸಿಂಹಾದ್ರಿಯ ಸಿಂಹ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ
ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ
ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಮುದ್ದು ಮುದ್ದು ಕಂದ ಕನ್ನಡದ
ಕಂದ

ತವರಿಗೆ ಇಂದು ಕೀರ್ತಿಯ ತಂದ
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
♫♫♫♫♫♫♫♫♫♫♫
ಹೂವಾದರೆ ನಾನು ಮುಕಾಂಬೆಯ
ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ
ಮೈಯನು ತೊಳಿವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಬೆರೆವೆ
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ
ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ
ನುಡಿಯಾಗಿರುವೆ
ಮುದ್ದು ಮುದ್ದು ಕಂದ ಕನ್ನಡದ
ಕಂದ

ತವರಿಗೆ ಇಂದು ಕೀರ್ತಿಯ ತಂದ
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
♫♫♫♫♫♫♫♫♫♫♫
ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ
ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು ಚೆನ್ನವ್ವನ
ಕರದಲಿ ಮೆರೆವೆ
ಬಲವಾದರೆ ನಾನು ಒಬವ್ವನ ಒನಕೆಯ ಮೆರೆವೆ
ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ
ಮುದ್ದು ಮುದ್ದು ಕಂದ ಕನ್ನಡದ
ಕಂದ

ತವರಿಗೆ ಇಂದು ಕೀರ್ತಿಯ ತಂದ
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ
ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಸಿರಗನ್ನಡಂ ಗೆಲ್ಗೆ….
ಸಿರಗನ್ನಡಂ ಗೆಲ್ಗೆ….
ಸಿರಗನ್ನಡಂ ಗೆಲ್ಗೆ….

 

Leave a Reply

Your email address will not be published. Required fields are marked *