ಕರೆಯೋಲೆ ಕರೆವ ಓಲೆ – Kareyole Kareva Ole Lyrics in Kannada – Rangitaranga Movie Lyrics

ಚಿತ್ರ: ರಂಗಿತರಂಗ

ಕರೆಯೋಲೆ ಕರೆವ ಓಲೆ
ಕರೆ ಮಾಡಿ ಕರೆದೋಲೆ
ಕರದಲ್ಲಿ ಕಲಮ ಹಿಡಿದು
ಕರಿಶಾಯಿ ಬರೆದೋಲೆ
ಕಲ್ಲಿನ ಕೊಳಲಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೋಳೆ
ಕಣ್ಣಿಗೆ ಕಾಣದ ಕಾಗದದಲ್ಲಿ
ಕು೦ಚದಿ ಕಾವ್ಯವ ಕೊರೆದೋಲೆ
ಕರೆಯೋಲೆ ಕರೆವ ಓಲೆ
ಕರೆ ಮಾಡಿ ಕರೆದೋಲೆ
ಕನಕಾ೦ಗಿ ಕೈಯಲ್ಲೊ೦ದು
ಕ೦ಚಿನ ಕೊಡಪಾನ
ಕೆರೆನೀರ ಕುಡಿಯೋದಕ್ಕು
ಕಟುವಾದ ಕಡಿವಾಣ
ಕೆರೆದ೦ಡೆ ಕಡೆಯಲ್ಲೆಲ್ಲೋ
ಕು೦ತೋನೆ ಕಡುಜಾಣ
ಅತೀ ಕ್ಷೀಣ ಸ್ಮೃತಿಯುಳ್ಳೋನ
ಕೆ೦ದಾವರೆ ಲಕುಷಾಣ
ಕೆ೦ಪಾದ ಕಮಲ ಕ೦ಡು
ಕೆಸರಲ್ಲೇ ಕಲೆತೋಳೆ
ಕ್ಷಣವೆಲ್ಲ ಕೃತಕಕಥೆಯಲಿ
ಕಳೆಯೋದ ಕಲಿತೋಳೆ
ಕಲ್ಲಿನ ಕೊಳಲಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೋಳೆ
ಕಣ್ಣಿಗೆ ಕಾಣದ ಕಾಗದದಲ್ಲಿ
ಕು೦ಚದಿ ಕಾವ್ಯವ ಕೊರೆದೋಲೆ
ಕರೆಯೋಲೆ ಕರೆವ ಓಲೆ
ಕರೆ ಮಾಡಿ ಕರೆದೋಲೆ
ಕರದಲ್ಲಿ ಕಲಮ ಹಿಡಿದು
ಕರಿಶಾಯಿ ಬರೆದೋಲೆ

Leave a Reply

Your email address will not be published. Required fields are marked *