ಕಂಡೆ ಪರಶಿವನ – Kande Paeasivana Song Lyrics – Raghu Dixit

ಸಾಹಿತ್ಯ: ರಾಘವೇಂದ್ರ ಕಾಮತ್
ಸಂಗೀತ: ರಘು ದೀಕ್ಷಿತ್
ಗಾಯಕ: ರಘು ದೀಕ್ಷಿತ್

ಹೇ ಹುಟ್ಸಿದ್ಮ್ಯಾಗೇ ಹುಲ್ಲನ್ಯಾಕೇ
ತಿಂಬಕ್ಯಾಕೆ ಬಿಟ್ಟೋಯ್ತಾನೇ
ಕಷ್ಟದ ಹಿಂದೆ ಸುಖವನಿಟ್ಟು
ಕಾಣದಂಗ ಕೂತು ನೋಡ್ತಾ ಅವ್ನೇ
ಕ್ವಾರಣ್ಯಾನೇ ಕೈಯಾಗ ಹಿಡಿದು
ಕಾಣದಂಗ ಬಂದು ಕಾಪಾಡ್ದೋವ್ನೇ
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ..
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ ಹೇ
♬♬♬♬♬♬♬♬♬♬♬♬


ಹೋ ಕಲ್ಲು ಮುಳ್ಳಿನ ಹಾದಿಯಾಗೆ
ಜ್ವಾಪನ ಇದ್ರೂ ಸಿಕ್ಕೊಂಬಿದ್ರೇ
ಇಳಿಜಾರಾದ್ರೂ ಇನ್ನೊಂದ್ ಹೆಜ್ಜೇ
ಊರಂಗಿಲ್ಲ ಅನ್ನಂಗಾದ್ರೇ.
ಕ್ವಾರಣ್ಯಾನೇ ಕೈಯಾಗ ಹಿಡಿದು
ಕಾಣದಂಗ ಬಂದು ಕಾಪಾಡ್ತಾವ್ನೇ
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ.. ಹೇ
♬♬♬♬♬♬♬♬♬♬♬♬

ಸಂಕಟಾ ಸಂಕಟಾ

ಜೀವನದ ಸಂಗಡ ಇಟ್ಟವ್ನೇ
ಎಕ್ಡಾ ಚಮ್ಡಿ ಹರಿದು ದಮ್ಡಿಗಿಟ್ಸೊಡಂವ್ನೇ
ಕೋಟಿ ಕೋಟಿ ಶೋದ್ನೇ

ಬೆನ್ನಿಗೆ ಕಟ್ಟಿದ್ದವನೇ
ಕತ್ಲೇ ಕತ್ಲೇ ಜೀವನಾ

ಪೂರ್ತಿ ಕತ್ಲಾಗೇ
ಆಕಾಶಾನೆ ಕಳಚಿ

ತಲೆಮ್ಯಾಗ್ ಬಿದ್ಹಂಗೆ
ಮುಗದೆ ಹೋಯ್ತು ಜೀವನಾ

ಇನ್ನೂ ಬಾಳೋದ್ಯಾಕೇ..
ಕತ್ಲಾಗ್ ಇಣ್ಕೋ ಬೆಳಕಿನ್ಹಂಗೇ
ಕಾಣದಂಗ್ ಬಂದು ಕಾಯೋನ್ ಅವ್ನೇ
ಕ್ವಾರಣ್ಯಾನೇ ಕೈಯಾಗ ಹಿಡಿದು
ಮಾರ್ ವೇಷದಾಗ ಬಂದೋನ್ ಅವ್ನೇ
ಕಷ್ಟಕ್ ಬಂದು ಕಾಪಾಡವ್ನು
ಏಳು ಮಲೇ ಮಾದಪ್ಪಾನೇ
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ..
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ….ಹೇ
♬♬♬♬♬♬♬♬♬♬♬♬


ಕಷ್ಟ ನಷ್ಟ ಸಂಕಟ

ಶೋದ್ನೇ ಸಹಿಸೋರ್ಗೇ
ಕೊಡ್ತಾನೋಡು ಹುಡ್ಕಿ ಹುಡ್ಕಿ ಒಳ್ಳೇವ್ರಿಗೆ

ಪಾಪಾ ಮಾಡ್ದೋರ್ಗೇಲ್ಲಾ
ಅವ್ನು ಖುಷಿ ಕೊಟ್ನೇ
ಎದ್ನೋ ಬಿದ್ನೋ ಬದುಕು

ಬಾಳ್ವೇ ವ್ಯಾಪಾರ
ಹಾಳಾಗ್ಹೋಗ್ಲಿ ಸಾಕಾಗ್ಹೋಯ್ತು ಸಂಸಾರ
ಸಿಗದೆ ಹೋಯ್ತು ನೆಮ್ದಿ ತಾಳ್ಮೇ ಜೊತೆಗಿಟ್ನೇ
ಹೇ ಡಂಬಾಚಾರದ ಬಾಳ್ವೇ ನಡಸಿ
ಗೆದ್ದೋರ್ ನೆಂದು ಕೈ ಹಿಡಿದವ್ನೇ
ಕ್ವಾರಣ್ಯಾನೇ ಕೈಯಾಗ್ ಹಿಡಿದು
ಮಾರ್ ವೇಷದಾಗ ಬಂದೋನ್ ಅವ್ನೇ
ಕಷ್ಟಕ್ ಬಂದು ಕಾಪಾಡವ್ನು
ಏಳು ಮಲೇ ಮಾದಪ್ಪಾನೇ
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ..
ಹೇ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ..
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಪರಶಿವನ. ಓಹ್..

Leave a Reply

Your email address will not be published. Required fields are marked *