ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಡಾ. ರಾಜ್
ಒಮ್ಮೆ ನಿನ್ನ ವೀಣೆಯನ್ನು
ನುಡಿಸಲಾರೆಯ..
ಸುಮ್ಮನಿರುವ ತಂತಿಯನ್ನು
ಮೀಟಲಾರೆಯಾ…
ತಾಳಲಾರೆ ರಾಘವೇಂದ್ರ
ಕೇಳುವಾಸೆಯಾ…
ಬಾಳಿನಲ್ಲಿ ಬೆರೆಸು ನಿನ್ನಾ
ನಾದ ಮಹಿಮೆಯ...
ಒಮ್ಮೆ ನಿನ್ನಾ ವೀಣೆಯನ್ನು
ನುಡಿಸಲಾರೆಯಾ…
♫♫♫♫♫♫♫♫♫♫♫♫
ಗಾನಲಹರಿ ಜಗವನೆಲ್ಲ...
ಆಅಅಅಅಅಅಅಅಅಅ
ಗಾನಲಹರಿ ಜಗವನೆಲ್ಲ
ತುಂಬಿ ಕುಣಿಸಲಿ...
ಧ್ಯಾನದಲ್ಲಿ ಲೀನವಾಗಿ
ಜೀವ ನಲಿಯಲಿ...
ನಾನು ಎಂಬ ಭಾವವಿಂದೆ
ಕರಗಿ ಹೋಗಲಿ…
ನೀನೇ ತನುವ ಮನವ ತುಂಬಿ
ಬಾಳು ಬೆಳಗಲಿ
ಒಮ್ಮೆ ನಿನ್ನ ವೀಣೆಯನ್ನು
ನುಡಿಸಲಾರೆಯಾ…
ಸುಮ್ಮನಿರುವ ತಂತಿಯನ್ನು
ಮೀಟಲಾರೆಯಾ…
♫♫♫♫♫♫♫♫♫♫♫♫
ವೇದ ಘೋಷ ಜೊತೆಗೆ ಸೇರಿ
ಶ್ರುತಿಯ ಬೆರಸಲಿ...
ವೇದ ಘೋಷ ಜೊತೆಗೆ ಸೇರಿ
ಶ್ರುತಿಯ ಬೆರಸಲಿ...
ಗಾನ ಗಂಗೆಯಲ್ಲಿ...
ಜೀವರಾಶಿ ಮುಳುಗಲಿ
ಶಾರದೆಯೇ ಮೈ ಮರೆತು
ತಲೆಯದೂಗಲಿ
ಶಾರದೆಯೇ ಮೈ ಮರೆತು
ತಲೆಯದೂಗಲಿ…
ಒಮ್ಮೆ ನಿನ್ನ ವೀಣೆಯನ್ನು
ನುಡಿಸಲಾರೆಯಾ…
ಸುಮ್ಮನಿರುವ ತಂತಿಯನ್ನು
ಮೀಟಲಾರೆಯಾ…
ತಾಳಲಾರೆ ರಾಘವೇಂದ್ರ
ಕೇಳುವಾಸೆಯಾ…
ಬಾಳಿನಲ್ಲಿ ಬೆರೆಸು ನಿನ್ನ
ನಾದ ಮಹಿಮೆಯ...
ಒಮ್ಮೆ ನಿನ್ನ ವೀಣೆಯನ್ನು
ನುಡಿಸಲಾರೆಯಾ…