ಚಿತ್ರ: ಅಪ್ಪಾಜಿ
ಗಾಯಕ: SPB
ಏನೇ ಕನ್ನಡತೀ
ನೀ ಯಾಕೆ ಹಿಂಗಾಡ್ತಿಯೇ
ಏನೇ ಕನ್ನಡತಿ
ನೀ ಯಾಕೆ ಹಿಂಗಾಡ್ತಿ
ಇಂಗ್ಲೀಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ
ಈ ಕನ್ನಡ ನೆಲ
ಕನ್ನಡ ಜಲ ಕನ್ನಡ ಗಾಳಿ
ಕನ್ನಡ ಅನ್ನ ಹೇ..
ಎಂತ ಚಂದಾನೊ
ಗೊತ್ತೇನೆ ಶ್ರೀಮತಿ
ಯಾಕೆ ಈ ಥರ
ಅನುಕರಣೆ ಮಾಡುತಿ
ಕನ್ನಡ ಸೊಗಡಲಿ
ನೀ ಸುಖವ ಕಾಣುತಿ
ಕಲಿಸೋಕೆ ಬಂದೆನಾ
ಕನ್ನಡದ ಭೂಪತಿ
ಏನೇ ಕನ್ನಡತಿ
ನೀ ಯಾಕೆ ಹಿಂಗಾಡ್ತಿ
ಇಂಗ್ಲೀಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ
♫♫♫♫♫♫♫♫♫♫♫♫
ಪೊಗರು ತುಂಬಾ ನಡೆ
ಕೊಬ್ಬು ಎಲ್ಲ ಕಡೆ
ಮೂಗು ತುದಿ ಕೋಪ
ಸಾಕು ಸಾಕು ಬಿಡೆ
ಆನೆ ಕೂಡ ಅಡಗಿಸೋಕೆ
ಅಂಕುಶವೂ ಒಂದಿದೆ
ಹೆಣ್ಣು ಹುಲಿ ಪಳಗಿಸೋಕೆ
ಕನ್ನಡದ ಗಂಡಿದೆ
ಕನ್ನಡದ ಗಂಡಿದೆ
ಕನ್ನಡದ ಗಂಡಿದೆ
ಬಾರೆ ಕಣ್ಮಣಿ
ನನ್ ಮುದ್ದಿನರಗಿಣಿ
ನೀ ಕೇಳು ಕಣಿ ಕಣಿ
ಲಜ್ಜೆ ಗಿಜ್ಜೆ ಕಲಿಸ್ತೀನಿ
ನಿನ್ನ ಕೊಬ್ಬು ಇಳಿಸ್ತಿನಿ
ಹೊಯ್….
ಯಾಕೆ ಈ ಥರ
ಅನುಕರಣೆ ಮಾಡುತಿ
ಯಾಕೆ ಈ ಥರ
ಅನುಕರಣೆ ಮಾಡುತಿ
ಕನ್ನಡ ಸೊಗಡಲಿ
ನೀ ಸುಖವ ಕಾಣುತಿ
ಕಲಿಸೋಕೆ ಬಂದೆನಾ
ಕನ್ನಡದ ಭೂಪತಿ
ಏನೇ ಕನ್ನಡತಿ
ನೀ ಯಾಕೆ ಹಿಂಗಾಡ್ತಿ
ಇಂಗ್ಲೀಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ…
♫♫♫♫♫♫♫♫♫♫♫♫
ಕುಂಕುಮದ ಬೊಟ್ಟು
ಹಣೆಯ ಮೇಲೆ ಇಟ್ಟು
ಚಂದದ ಸೀರೆ ಉಟ್ಟು
ಹೂವ ಮುಡಿಯಲಿಟ್ಟು
ಬಳುಕಿ ನಡೆದು ಬರುವಾಗ
ಕಣ್ಣೆರಡು ಸಾಲದು
ಈ ಜೀನ್ಸು ಜಾಕೆಟ್ಟು
ನಿನ್ನಂದಕೆ ಸಲ್ಲದು
ನಿನ್ನಂದಕೆ ಸಲ್ಲದು
ನಿನ್ನಂದಕೆ ಸಲ್ಲದು
ಮುತ್ತು ಮೂಗುತಿ
ಎಂಥ ಚಂದ ಅನ್ನುತಿ
ಅದೇ ನಾಡ ಸಂಸ್ಕೃತಿ
ನಡೆ ನುಡಿ ಕಲಿಸ್ತೀನಿ
ಕನ್ನಡತಿ ಮಾಡುತೀನಿ
ಹೊಯ್…
ಯಾಕೆ ಈ ಥರ
ಅನುಕರಣೆ ಮಾಡುತಿ
ಯಾಕೆ ಈ ಥರ
ಅನುಕರಣೆ ಮಾಡುತಿ
ಕನ್ನಡ ಸೊಗಡಲಿ
ನೀ ಸುಖವ ಕಾಣುತಿ
ಕಲಿಸೋಕೆ ಬಂದೆನಾ
ಕನ್ನಡದ ಭೂಪತಿ
ಏನೇ ಕನ್ನಡತಿ
ನೀ ಯಾಕೆ ಹಿಂಗಾಡ್ತಿ
ಇಂಗ್ಲೀಷು ಯಾಕಾಡ್ತಿ
ಎಂದು ಕನ್ನಡ ಮಾತಾಡ್ತಿ
ಈ ಕನ್ನಡ ನೆಲ
ಕನ್ನಡ ಜಲ ಕನ್ನಡ ಗಾಳಿ
ಕನ್ನಡ ಅನ್ನ
ಎಂತ ಚಂದಾನೊ
ಗೊತ್ತೇನೆ ಶ್ರೀಮತಿ
ಯಾಕೆ ಈ ಥರ
ಅನುಕರಣೆ ಮಾಡುತಿ
ಕನ್ನಡ ಸೊಗಡಲಿ
ನೀ ಸುಖವ ಕಾಣುತಿ
ಕಲಿಸೋಕೆ ಬಂದೆನಾ
ಕನ್ನಡದ ಭೂಪತಿ
ಕನ್ನಡ ಸೊಗಡಲಿ
ನೀ ಸುಖವ ಕಾಣುತಿ
ಕಲಿಸೋಕೆ ಬಂದೆನಾ
ಕನ್ನಡದ ಭೂಪತಿ