ಚಿತ್ರ: ಹಾಲುಂಡ ತವರು
ಕುಕ್ಕೂ…
ಕುಕ್ಕೂ…
ಅಹಾ…
ಅಹಾ ಅಹಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ
ಎಲೆ ನೀರಿನಲೆ ಎಲೆ ಹಸಿರ ಹಸಿರೇ
ಇಂಥಾ ಜೋಡಿನಾ ಎಂದಾರಾ ಕಂಡಿರಾ
ಓ…. ಕುಹೂ ಇಂಚರವೆ
ಸುಖಿ ಸಂಕುಲವೇ
ಇಂಥಾ ಹಿಂಗಾರಿನ ಮುಂಗಾರಿನ
ಮಿಲನ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ
♫♫♫♫♫♫♫♫♫♫♫♫
ಹೋಹೋಹೊಹೋ
ಆಆ ಆಆ ಆಆ ಆಆ
ಓ ಓ ಓ ಓ ಓ ತಾನನ
ನನ್ನವಳು ಚಂದನ
ಹೆಂಗರುಳ ಹೂ ಮನ
ಋತುವೆ ಸುರಿಸು ಇವಳಿಗೆ ಹೂಮಳೆ
ಎದೆಯಲಿ ಆದರ
ತುಂಬಿರುವ ಸಾಗರ
ನನ್ನ ದೊರೆಯ ಹೃದಯ ನಿವಾಸಿ ನಾ
ಅರೆರೆ ನುಡಿದೆ ಕವನ
ನುಡಿಸೋ ಕವಿಗೆ ನಮನ
ಓ… ಮಹಾ ಮೇಘಗಳೆ
ಅಸ್ತುದೈವಗಳೇ
ಇಂಥಾ ಆಂತರ್ಯದ ಸೌಂದಯ೯ದ
ಸೊಬಗು ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ
♫♫♫♫♫♫♫♫♫♫♫♫
ತನ್ನನನಾ ತಾನನ
ಏ…ಹೇ..
ತಂದನನನಾ ತಾನನ
ಹುಂ..ಹೂ..
ಹುಣ್ಣಿಮೆಯ ಆಗಸ ಬೆಳಕಿನ ಪಾಯಸ
ಸುರಿಸೆ ಸವಿದೆ ಸತಿಯೇ ನೀ ಸವಿ
ನಿಮ್ಮ ತುಟಿ ತೋರಿಸಿ
ನನ್ನ ತುಟಿ ಸೇರಿಸಿ
ನೀವು ಸವಿದ ಸವಿಗು ಇದು ಸವಿ
ಅರೆರೆ ನುಡಿದೆ ಪ್ರಾಸಾ
ಕವಿಯ ಜೊತೆಗೆ ವಾಸ
ಓ…. ಚುಕ್ಕಿ ತಾರೆಗಳೆ
ಸುಖೀ ಮೇಳಗಳೇ
ಇಂಥಾ ಸಂಸಾರದ ಸವಿಯೂಟದ
ಸವಿಯ ಕಂಡಿರಾ
ಎಲೆ ಹೊಂಬಿಸೆಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ
ಎಲೆ ನೀರಿನಲೆ ಎಲೆ ಹಸಿರ್ ಹಸಿರೇ
ಇಂಥಾ ಜೋಡಿನಾ ಎಂದಾರ ಕಂಡಿರಾ
ಓ… ಕುಹೂ ಇಂಚರವೇ
ಸುಖಿ ಸಂಕುಲವೇ
ಇಂಥಾ ಹಿಂಗಾರಿನ ಮುಂಗಾರಿನ
ಮಿಲನ ಕಂಡಿರಾ
ಎಲೆ ಹೊಂಬಿಸಿಲೆ ಎಲೆ
ತಂಬೆಲರೆ
ಇಂಥಾ ಜೋಡಿನಾ ಎಲ್ಲರಾ ಕಂಡಿರಾ
ಎಲೆ