ಅಲ್ಲಿ ಇಲ್ಲಿ ಹುಡುಕುತ ಕಣ್ಣು – Alli illi hudukutha Kannu Song Lyrics – Boregowda Bengaloorige banda

PK-Music

ಬೋರೆಗೌಡ ಬೆಂಗಳೂರಿಗೆ ಬಂದ

ಅಲ್ಲಿ ಇಲ್ಲಿ ಹುಡುಕುತ ಕಣ್ಣು
ಏನೋ ಹೇಳಿತೂ

ಅತ್ತ ಇತ್ತ ಆಡುವ ಮನಸೂ

ಏನೋ ಕೇಳಿತೂ
.. ಚಿನ್ನಾ ನಿನ್ನ ಕಂಡು ಕಣ್ಣೂ
ನನ್ನೇ ಮರೆಯಿತೂ

ಕನಸೂ ನನಸೂ ಎಂದೀ ಮನಸು

ಹಾಡೀ ಕುಣಿಯಿತೂ
ಲಾ ಲ್ಲ ಲಾ

ಲಾ ಲಾ ಲಾ

ಲಾ ಲಾ ಲ ಲಾ ಲಾ ಲಾ
♬♬♬♬♬♬♬♬♬♬♬♬


ಏಕೋ ಏನೋ ಅಂದಿನ ರಾತ್ರೀ
ನಿದ್ದೇ ಇಲ್ಲದೇ

ನಗುವು ನಲಿವು ಏನೋ ನೋವು
ನನ್ನಾ ಕಾಡಿದೇ

..

......

ಅಂತೇ ಆಗಿ ಇರುಳಲಿ ಕೊರಗಿ

ಹೊರಳೀ ಬಳಲಿದೇ
ಹುಣ್ಣಿಮೆ ಬೆಳಕು ಉರಿಬಿಸಿಲಾಗಿ

ಬೆಂದೂ ಬೆವರಿದೇ
ಬಿಟ್ಟಿನ್ನು ಇರಲಾಗದೆ
ನಿನ್ನನ್ನು ಹುಡುಕಾಡಿದೆ
ನೀ ಸಿಕ್ಕಿದೇ ನೀ ಸಿಕ್ಕಿದೇ
ಸುಖದಿಂದ ನಾ ಸೊಕ್ಕಿದೇ
ಓ.. ಅಲ್ಲಿ ಇಲ್ಲಿ ಹುಡುಕುತ ಕಣ್ಣೂ

ಏನೋ ಹೇಳಿತೂ
ಅತ್ತ ಇತ್ತ ಆಡುವ ಮನಸೂ

ಏನೋ ಕೇಳಿತೂ

ಆಹಾ ಆಹಾ ಆಹಾ

ಓಹೋ ಓಓಓಓಓ
♬♬♬♬♬♬♬♬♬♬♬♬


ಗಲ್ಲಕೆ ಗಲ್ಲ ಸೋಕಲು ಕೆನ್ನೇ
ಕೆಂಪೇಕಾಯಿತೂ

ಕೆಂದುಟಿ ಜೇನ ಸವಿಯುವ ಮುನ್ನ

ಭಯವೇಕಾಯಿತೂ
ಹಾ
....

....
ಕಾಣದ ಸುಖಕೇ ಹೊಸ ಅನುಭವಕೆ
ಎದೆ ಝಲ್ ಎಂದಿತೂ

ಮೆತ್ತನೆ ಮಯ್ಯಿ ಒತ್ತಲು ನನ್ನ

ಮತ್ತೂ ಏರಿತೂ
ಮೊಗ್ಗೊಂದು ಹೂವಾಯಿತೂ
ನನ್ನಾಸೆ ಪೂರೈಸಿತೂ
ಹಗುರಾಯಿತೂ ಹಗುರಾಯಿತೂ
ತೇಲಾಡುವಂತಾಯಿತೂ
.. ಅಲ್ಲಿ ಇಲ್ಲಿ ಹುಡುಕುತ ಕಣ್ಣೂ

ಏನೋ ಹೇಳಿತೂ
ಅತ್ತ ಇತ್ತ ಆಡುವ ಮನಸೂ

ಏನೋ ಕೇಳಿತೂ
ಚಿನ್ನಾ ನಿನ್ನ ಕಂಡು ಕಣ್ಣೂ

ನನ್ನೇ ಮರೆಯಿತೂ
ಕನಸೂ ನನಸೂ ಎಂದೀ ಮನಸು
ಹಾಡೀ ಕುಣಿಯಿತೂ
ಲಾ ಲ್ಲ ಲಾ

ಲಾ ಲಾ ಲಾ

ಲಾ ಲಾ ಲ ಲಾ ಲಾ ಲಾ

Leave a Reply

Your email address will not be published. Required fields are marked *