Yava janmada maithri song Lyrics in kannada


ಚಿತ್ರ: ಗೌರಿ
ಆಆಆಆಆಆಆ
ಆಆಆಆಆಆಆ
ಯಾವ ಜನ್ಮದ ಮೈತ್ರಿ
ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ
ಬಂಧಿಸಿಹುದೋ ಕಾಣೆ……
ಯಾವ ಜನ್ಮದ ಮೈತ್ರಿ
ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ
ಬಂಧಿಸಿಹುದೋ ಕಾಣೆ……
ಯಾವ ಜನ್ಮದ ಮೈತ್ರಿ…….
♬♬♬♬♬♬♬♬♬♬♬♬♬♬♬♬
ಎಲ್ಲಿದ್ದರೇನಂತೆ
ನಿನ್ನನೊಲಿಯದೆ ಮಾಣೆ
ಎಲ್ಲಿದ್ದರೇನಂತೆ
ನಿನ್ನನೊಲಿಯದೆ ಮಾಣೆ
ಗುರುದೇವನಾಣೆ
ನನ್ನ ನೆಚ್ಚಿನ ಬಂಧು
ಯಾವ ಜನ್ಮದ ಮೈತ್ರಿ….

♬♬♬♬♬♬♬♬♬♬♬♬♬♬♬♬

ವಿಶ್ವ ಜೀವನವೊಂದು
ಪಾರವಿಲ್ಲದ ಸಿಂಧು
ವಿಶ್ವ ಜೀವನವೊಂದು
ಪಾರವಿಲ್ಲದ ಸಿಂಧು
ಮೇಲೆ ತೆರೆನೊರೆಯೆದ್ದು
ಭೋರ್ಗರೆಯುತಿರೆ ರೇಗಿ

ಅದರಂತರಾಳದಲಿ

ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿವೆ
ಪ್ರೇಮ ತೀರ್ಥದಿ ಮಿಂದು
ಯಾವ ಜನ್ಮದ ಮೈತ್ರಿ….
♬♬♬♬♬♬♬♬♬♬♬♬♬♬♬♬
ಅದರರ್ಥಗಿರ್ಥಗಳು
ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ
ಕಾಲಹರಣವದೇಕೆ
ಬಾರಯ್ಯ, ಮಮಬಂಧು,
ಜೀವನಪಥದೊಳಾವು
ಒಂದಾಗಿ ಮುಂದುವರಿಯುವ……..
ಯಾವ ಜನ್ಮದ ಮೈತ್ರಿ………

Leave a Reply

Your email address will not be published. Required fields are marked *