UI Movie Trailer Review
The World Leaders Gifted U & I With…
- Global Warming
- Covid 19
- Inflation
- AI
- Unemployment
- Wars
ಹೀಗೆ ಹೇಳುತ್ತಾ ಶುರುವಾಗುವ ಟ್ರೈಲರ್ ಮುಗಿಯುವಷ್ಟರಲ್ಲಿ ಮೈ ಜುಮ್ಮೆನಿಸುವಂತೆ ಮಾಡುವುದು ಖಚಿತ. ಯಪ್ಪಾ! ಈ ರೀತಿ ಯೋಚನೆ ಮಾಡಲು ಸಾದ್ಯವೇ ಎನ್ನುವಷ್ಟು ಅದ್ಭುತವಾಗಿದೆ ಉಪೇಂದ್ರ ಅಭಿನಯದ ಮತ್ತು ನಿರ್ದೇಶನ UI (ಯುಐ) ಸಿನಿಮಾದ ಟ್ರೈಲರ್.
ಬರೋಬ್ಬರಿ 9 ವರ್ಷಗಳು ಕಳೆದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾ ನಿರ್ದೇಶನ ಮಾಡುತ್ತಿರುವ ಚಿತ್ರ “ಯುಐ“, ಈ ಚಿತ್ರವು ಸುಮಾರು ಎರಡು ವರ್ಷಗಳಿಂದ ಚಿತ್ರೀಕರಣ ಶುರು ಮಾಡಿ ಇಂದು ಬಿಡುಗಡೆಗೆ ಸಿದ್ಧವಾಗಿದೆ, ಚಿತ್ರೀಕರಣದ ಶುರುವಿನಿಂದ ಉಪೇಂದ್ರರವರು ಚಿತ್ರದ ಬಗ್ಗೆ ಟೀಸರ್, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದ್ದರು ಆದರೆ ಸಿನಿಮಾ ಯಾವ ಕೆಟಗರಿಗೆ ಸೇರಿದೆ ಎಂಬ ಅಂಶವನ್ನು ಹೊರಬಿಟ್ಟಿರಲಿಲ್ಲ ಆದರೆ ಈ ಟ್ರೈಲರ್ ನಿಂದ ಸಿನಿಮಾ ಯಾವ ಅಂಶವನ್ನು ಒಳಗೊಂಡಿದೆ ಎಂಬುದು ಮೇಲ್ನೋಟಕ್ಕೆ ಕಂಡರೂ ಉಪೇಂದ್ರ ಅವರ ಸಿನಿಮಾವನ್ನು ಮತ್ತು ಅವರ ಆಲೋಚನೆಯನ್ನು ಅಷ್ಟು ಸುಲಭವಾಗಿ ವಿಮರ್ಶೆ ಮಾಡುವುದು ಸುಲಭ ಅಲ್ಲ!.
ಸಿನಿಮಾದ ಸಾರಾಂಶ ಏನೆಂದು ಅರಿಯಲು ಸಿನಿಮಾ ನೋಡಲೇಬೇಕು ಆದರೆ ಟ್ರೈಲರ್ ನ ಸಾರಾಂಶವನ್ನು ಕೆದಕಿದರೆ ಮೈಜುಮ್ಮೆನಿಸುವುದು ಖಂಡಿತ, 2040ರ ಇಸವಿಯ ಕಲ್ಪನಾ ಲೋಕವನ್ನು ಉಪೇಂದ್ರರವರು ತಮ್ಮ ಶೈಲಿಯಲ್ಲಿ ಬಿಚ್ಚಿಟ್ಟಿದ್ದಾರೆ.
ಟ್ರೈಲರ್ ನಲ್ಲಿ ಅಂತದ್ದೇನಿದೆ ಎಂದು ಹೇಳುವುದಾದರೆ..
- ಮೊದಲ ಸಾಲಿನಲ್ಲಿ ಹೇಳಿರುವಂತೆ “ಪ್ರಪಂಚದ ನಾಯಕರು ನಮಗೆ ನಿಮಗೆ ಯಾವ ಕೊಡುಗೆಯನ್ನು ನೀಡಿದ್ದಾರೆಂದರೆ, Global Warming ( ಜಾಗತಿಕ ತಾಪಮಾನ ), ಕೋವಿಡ್ 19, Inflation (ಹಣದುಬ್ಬರ), AI ( Artificial Intelligence ), ನಿರುದ್ಯೋಗ, Wars (ಯುದ್ಧಗಳು)”. ಎಂದು ಹೇಳುತ್ತಾರೆ, ಅಂದರೆ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಜೀವನವನ್ನು ಸರ್ವನಾಶ ಮಾಡುತ್ತಿದ್ದಾರೆ ಎಂಬುವ ಅರ್ಥ ನೀಡುವ ವಿಷಯವಾಗಿದೆ.
- ನಂತರ ಎರಡನೇಯ ಹಂತದಲ್ಲಿ 2040ರ ಇಸವಿಯ ವೇಳೆಗೆ ಮನುಷ್ಯನಿಗೆ ತಿನ್ನಲು ಆಹಾರವಿಲ್ಲದೇ ಸಾಯುವ ಪರಿಸ್ಥಿತಿ ಬರಬಹುದು ಎಂದು ವಾರ್ನಿಂಗ್ ನೀಡಿದ್ದಾರೆ Warner, ಈ ದೃಶ್ಯದಲ್ಲಿ ಒಂದು ಬಾಳೆಹಣ್ಣಿಗೋಸ್ಕರ ಕಿತ್ತಾಡುವ ಜನರನ್ನು ಕಾಣುತ್ತೇವೆ.
- ನಂತರದ ದೃಶ್ಯದಲ್ಲಿ ಹಾಕಲು ಬಟ್ಟೆಯಿಲ್ಲದ, ತಿನ್ನಲು ಆಹಾರವಿಲ್ಲದ ಜನರಿಗೆ ಸರ್ಕಾರದ ವತಿಯಿಂದ ರೈಸ್ ಬಾಲ್ ಮತ್ತು ಮೊಬೈಲ್ ಗಳನ್ನು ಉಚಿತವಾಗಿ ಹಂಚಿಕೆ ಮಾಡುವ ದೃಶ್ಯ. ಈ ದೃಶ್ಯವು ನಮಗೆ ನಮ್ಮ ನಾಯಕರು ನಿಡುವ ಉಚಿತ ಯೋಜನೆಗಳನ್ನು ನೆನಪು ಮಾಡಿಸುತ್ತವೆ ಮತ್ತು ಉಚಿತ ಯೋಜನೆಗಳು ನಮ್ಮನ್ನು ಯಾವ ಪರಿಸ್ಥಿತಿ ತಳ್ಳಬಹುದು ಎಂದು ಎಚ್ಚರಿಕೆ ನೀಡುತ್ತವೆ.
- ಸತ್ತ ಹೆಣಗಳ ಮುಂದೆ ಕುಳಿತು ರೈಸ್ ಬಾಲ್ ಗಳನ್ನು ತಿನ್ನುವುದು ಭಯ ಹುಟ್ಟಿಸುವಂತಿದೆ.
- ಜೀವನ ಹರಕು-ಮುರುಕಲು ಆಗಿದ್ದರೂ ಜಾತಿ ಅಂತ ಕಿತ್ತಾಡುವ ಜನರು
- ಮಕ್ಕಳಿಗೆ ಜಾತಿ ಮುದ್ರೆಯನ್ನು ಹಾಕಿಸುವ ಸರ್ಕಾರ
- ಮೈ ಮೇಲೆ ಹಾಕಲು ಬಟ್ಟೆ ಇಲ್ಲದಿದ್ದರೂ, ಜೀವನದ ಸೋಲನ್ನು ಮರೆತು ಕ್ರಿಕೆಟ್ ನಾಯಕರ ಗೆಲುವನ್ನು ತಮ್ಮ ಗೆಲುವೆಂದು ಭಾವಿಸಿ ಸಂಭ್ರಮಿಸುವ ಯುವಕರು.
- ತಾವು ಹಳ್ಳಕ್ಕೆ ಬೀಳುವುದನ್ನೂ ಮರೆತು ಬೇರೊಬ್ಬರು ಮಂಗಳ ಗ್ರಹಕ್ಕೆ ಹೋಗುವ ದೃಶ್ಯವನ್ನು ನೋಡಿ ಹೆಮ್ಮೆ ಪಡುವ ಜನರು.
- ತಾವುಗಳು ಇರುವ ಜಾಗದಲ್ಲಿ ರಕ್ಷಣೆ ಇಲ್ಲದಿದ್ದರೂ ಸರ್ಕಾರ ಖರೀದಿಸಿರುವ ಶಸ್ತ್ರಗಳನ್ನು ನೋಡಿ ನಾವು ಸೇಫ್ ಎಂದು ಸಂತೋಷ ಪಡುವ ಕೆಲವರು.
- ಕೊನೆಯ ದೃಶ್ಯದಲ್ಲಿ ನಿರಂಕುಶ ಸರ್ವಾಧಿಕಾರಿಯಾಗಿ ಉಪೇಂದ್ರರ ಎಂಟ್ರಿ. ಸರ್ಕಾರದ ವಿರುದ್ಧ ಧಂಗೆ ಎದ್ದು ದಿಕ್ಕಾರ ಕೂಗುವ ಜನರನ್ನು ಶೂಟ್ ಮಾಡಿ ಕೊಲ್ಲುವ ಉಪೇಂದ್ರ.
“ಥೂ! ದಿಕ್ಕಾರಕ್ಕಿನ್ನ ಅಧಿಕಾರಕ್ ಬೆಲೆ ಜಾಸ್ತಿ”.
ಇಷ್ಟು ಅಂಶಗಳನ್ನು ಒಳಗೊಂಡಿರುವ ಯುಐ ಚಿತ್ರದ ಟ್ತೈಲರ್ ಡಿಸೆಂಬರ್ 20 ಕ್ಕೆ ಬಿಡುಗಡೆಗೆ ಸಿದ್ದವಾಗಿದೆ, ಸಿನಿಮಾವನ್ನು ನೋಡಲು ಉಪೇಂದ್ರ ಅಭಿಮಾನಿಗಳು ಮತ್ತ ಪ್ರೇಕ್ಷಕರು ಕಾಯುತ್ತಿರುವುದಂತೂ ನಿಜ. ಚಿತ್ರಕ್ಕೆ ಅಜನೀಶ ಲೋಕನಾಥ್ ಸಂಗೀತವನ್ನು ನೀಡಿದ್ದು ಬಹಳ ಸೊಗಸಾಗಿ ಮೂಡಿ ಬಂದಿದೆ.
ಲಹರಿ ಫಿಲ್ಮ್ಸ್ ಮತ್ತು Venus Entertrainers ಬ್ಯಾನರ್ ನ ಅಡಿಯಲ್ಲಿ, ಜಿ. ಮನೋರಂಜನ್ ಮತ್ತು ಶ್ರೀಕಾಂತ್ ಕೆ.ಪಿ ರವರು ನಿರ್ಮಾಣ ಮಾಡಿದ್ದಾರೆ.
2 thoughts on “UITheMovie – Warner UI Movie Trailer Review”