The Bengaluru Song Lyrics in Kannada – French Biriyani Kannada Movie | Danish Sait | Vasuki Vaibhav | Pannaga Bharana

Song Credits:
Song Name : The Bengaluru Song
Singer : Aditi Sagar
Lyricist : Vasuki Vaibhav, Avinash Balekkala
Music Director : Vasuki Vaibhav

ಅತಿಥಿ ದೇವೋ ಭವ
ಏನಿದು ಅವಸ್ಥೆ…?
ಬೇರೆ ಭಾಷೆ ಆಡೋ ಬಾಯಿ
ಆದ್ರೂ ಕನ್ನಡವೆ ನಮ್ ತಾಯಿ
ಮನಸು ಹೊಡ್ದಾಗ್ ತೆಂಗಿನಕಾಯಿ
ಟ್ರ್ಯಾಫಿಕ್ ಜ್ಯಾಮಲ್ ಹೇಗೋ ಸಾಯಿ
ನಮ ನಮ ನಮಸ್ತೆ
ಏನಿದು ಅವಸ್ಥೆ?
ಇದೇನು ಹಂಪ್ ? ಇಲ್ಲ ಸಮಾಧೀನ?
ಯಾಕಿಷ್ಟು ರಂಪ? ಸ್ವಲ್ಪ ಸಮಾಧಾನ
ಸಾವ್ಧಾನ ಬೆಂದಕಾಳೂರು..
ಲೈಕ್ ಶಂಕರ್ ನಾಗ್ಸ್ ಫ್ಯಾನ್ಸ್
ಜಸ್ಟ್ ಹೋಲ್ಡ್ ಒನ್ ಬೆಂಗಳೂರು
ಸಾವ್ಧನ ಬೆಂದಕಾಳೂರು
ಜಸ್ಟ್ ಹೋಲ್ಡ್ ಒನ್ ಬೆಂಗಳೂರು
ಅತಿಥಿ ದೇವೋ ಭವ..
ಅರೇ ಅರೇ ಅವಸರವೇ ಅಪಘಾತಕ್ಕೆ ಕಾರಣ
ಪ್ರಾಣಗೀಣ ಹೋದ್ರೆ
ಇನ್ನೊಂದ್ ಎಲ್ಲಿಂದ ತರಣ
ಅಂಬುಲೆನ್ಸೆ ಗೆ ಇಲ್ಲ ನೋಡು
ವಿ ಪಿ ನೇ ನಮ್ಮ ಗೋಳು
ಬೆಳ್ಗೆ ಸಂಜೆ ಸಿಲ್ಕ್ ಬೋರ್ಡು
ಟಿ ಬಾಳು ನಾಯಿ ಪಾಡು
ಫ್ಲೈ ಓವರ್ ಅಂಡರ್ ಪಾಸು
ಮೆಟ್ರೋ ಸತತ ಕಾಮಗಾರಿ
ಸ್ವಚ್ಛ ಭಾರತ ಆದ್ರೆ ಮನುಷ್ಯ ಮಾತ್ರ ಅಬ್ಬೇಪಾರಿ
ನೆನ್ನೆ ಭಿಕಾರಿ ಇವತ್ ಸಾಹುಕಾರ
ಇದೆ ನೋಡು ಬೆಂಗಳೂರಿನ ಚಮತ್ಕಾರ
ನೀನ್ ಕೆಲ್ಸಕ್ ಬಂದ್ಯೋ ಉಳ್ಸಕ್ ಬಂದ್ಯೋ
ಮೇರಿಯೋಕ್ ಬಂದ್ಯೋ ತೆರಿಯೋಕ್ ಬಂದ್ಯೋ
ಕೂಡಿ ಕಳ್ದು, ಗುಂಸಿ ಬಾಗ್ಸಿ
ಕಿತ್ ತಿನ್ದ್ ದಬಾಕಕ್ ಬಂದ್ಯೋ
ಟೈಮ್ ಇಲ್ಲ ಯಾರ್ಗೂ ಇಲ್ಲಿ
ಕೇಳಕ್ ನಿನ್ನ ಸಮಾಚಾರ
ಒಳ್ಲೇವ್ನಾಗಿದ್ರೇ ಮಾತ್ರ ಕಾದಿದೆ ಗ್ರಾಚಾರ
ಗ್ರಾಚಾರ..
ಅತಿ ವೇಗ ತಿಥಿ ಬೇಗ
ಅರ್ಜೆಂಟ್ ಇನ್ನ್ ಯಾತಕ್ಕೆ
ಹೆಲ್ಮೆಟ್ ಹಾಕ್ದೆ ಇದ್ರೆ ತಲೆ ಹೊಡ್ದೋಗೊ ಮಡಿಕೆ
ಡ್ರಿಂಕ್ ಅಂಡ್ ಡ್ರೈವ್ ಮಾಡ್ಲೆ ಬೇಡಿ
ಗಾಡಿ ಸೈಡಲ್ ಬಿಡಿ
ಸೇಫ್ ಆಗ್ ಮನೆಗ್ ಬಿಡ್ತೀವಿ ತಾನೇ
ವನ್ ಅಂಡ್ ಹಾಫು ಕೊಡಿ
ವನ್ ಅಂಡ್ ಹಾಫು ಕೊಡಿ
ದುಡ್ದಿದ್ದೆಲ್ಲ ಎಮ್ ಕಡೆಗೆ
ಜನ ಸಂಖ್ಯೆ ಗೆ ಸಾಕು ನಿಮ್ಮ ಕೊಡುಗೆ
ಜನ ಸಂಖ್ಯೆ ಗೆ ಸಾಕು ನಿಮ್ಮ ಕೊಡುಗೆ
ಅರೇ ಅರೇ ಪಟ್ಟೆ..
ನಿನಗೆ ಯಾಕೆ ಓಲ  ಉಬರ್
ನಮ್ಮೋರ ಸುತ್ತೋಕೆ ಆಟೋ ಸೂಪರ್
ಗಲ್ಲಿ ಗಲ್ಲಿ ಗಿರ್ಕಿ ಹೊಡ್ಸಿ ಹೊಟ್ಟೆ ತುಂಬಾ ಹೊಗೆ ಕುಡ್ಸಿ
ಬಾಡ್ಗೆ ಕೇಳದು.. ವೇರ್ ಟು ವೇರ್ ಫ್ರಮ್
ಸಾವ್ಧನ ಬೆಂದಕಾಳೂರು
ಜಸ್ಟ್ ಹೋಲ್ಡ್ ಒನ್ ಬೆಂಗಳೂರು
ಸಾವ್ಧನ ಬೆಂದಕಾಳೂರು..
ಜಸ್ಟ್ ಹೋಲ್ಡ್ ಒನ್ ಬೆಂಗಳೂರು
ಶಿವಜಿನಗರ್.. ನಿಂಗ್ ಒಂದ್ ದೊಡ್ಡು ನಮಸ್ಕಾರ

Leave a Reply

Your email address will not be published. Required fields are marked *