Keyboard: B Ajaneesh Loknath
Rhythm: Kalyan Chakravarthi
Strings: – Chennai Strings
Conductor: Yenzone Baghyanadhan
Mixed & Mastered by: Sajayan Kumar Renu Digi Studio (Bangalore)
Recorded by Sajayan Kumar
Vocals recorded @Prabathstudio Bangalore
Strings recorded By Biju James VGP Chennai
Music Production : Bobby C R, B Ajaneesh Loknath ABBS Studios(Bangalore)
Recorded by Narasimha Kruthi Audio’s Bangalore
Live percussions : Venky & group Recorded by Ashwin Prabhath Studio Bangalore
Flute: Kiran Shehnai: Balesh Recorded by Divine 2 BarQ studio Chennai
Conducted by Yenzone Baghyanadhan
Additional Vocals: B. Ajaneesh loknath Ganesh karanth Madhwesh Bharadwaj Hemanth
Recorded by Ashwin Prabhath Studio Bangalore
Coordinator: K. D. Vincent
Banner: Hombale Films
ಚಿತ್ರ: ಕಾಂತಾರ
ವಿಜಯ್ ಪ್ರಕಾಶ್ & ಅನನ್ಯ ಭಟ್
ಬಿ. ಅಜನೀಶ್ ಲೋಕನಾಥ್
ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ
ಅಗೆವಾ ಮಾಯೇ
ಗಾಂಧಾರಿಯಂತೆ
ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
ಮಂದಹಾಸಾ
ಆಹಾ ನಲುಮೆಯಾ
ಶ್ರಾವಣ ಮಾಸಾ
ಮುದ್ದಾದ ಮಾಯಾಂಗಿ
ಮೌನದ ಸಾರಂಗಿ
ಮೋಹಕ ಮದರಂಗಿ
ಕನ್ನ ಹಾಕಿದೆ ಮುಂಗುರುಳ ಸೋಕಿ
♬♬♬♬♬♬♬♬♬♬♬♬
ಮಾತಾಡುವಾ ಮಂದಾರವೇ
ಕಂಗೊಳಿಸಬೇಡಾ ಹೇಳದೇ
ನಾನೇತಕೆ ನಿನಗ್ಹೇಳಲಿ
ನಿನ್ನ ಮೈಯ ತುಂಬಾಕಣ್ಣಿದೆ
ಮನದಾಳದ ರಸ ಮಂಜರಿ
ರಂಗೇರಿ ನಿನ್ನ ಕಾದಿದೆ
ಪಿಸು ಮಾತಿನ ಪಂದ್ಯಾವಳಿ
ಆಕಾಶವಾಣಿ ಆಗಿದೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠ ಮಾಡಿದೆ
ಮಾಡು ಬಾ ಕೊಂಗಾಟವಾ
ಕಣ್ಣಿಗೆ ಕಾಣೋ ಹೂಗಳೆಲ್ಲ
ಏನೋ ಕೇಳುತಿವೆ
ನಿನ್ನಯಾ ನೆರಳ ಮೇಲೆ ನೂರು
ಚಾಡಿ ಹೇಳುತಿವೆ
ಏ.. ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ
ಅಗೆವಾ ಮಾಯೇ
ಗಾಂಧಾರಿಯಂತೆ
ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
♬♬♬♬♬♬♬♬♬♬♬♬
ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ
ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ
ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ ಹಾಕಿದೆ
ನಾ ಕಾಣುವಾ ಕನಸಲ್ಲಿಯೇ
ನೀನ್ಯಾಕೆ ಬೇಲಿ ಹಾರುವೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠಮಾಡಿದೆ
ಮಾಡುಬಾ ಕೊಂಗಾಟವಾ
ಸುಂದರವಾದ ಸೋಜಿಗವೆಲ್ಲಾ
ಕಣ್ಣಾ ಮುಂದೆ ಇದೆ
ಬಣ್ಣಿಸಬಂದಾ ರೂಪಕವೆಲ್ಲಾ
ತಾನೇ ಸೋಲುತಿದೆ
ಏ.. ಮಂದಹಾಸಾ
ಆಹಾ ನಲುಮೆಯಾ
ಶ್ರಾವಣ ಮಾಸಾ