ರೇಷನ್ ಕಾರ್ಡ್ ( Ration Card ) ಒಂದು ಭಾರತೀಯ ಪ್ರಜೆಯ ಮುಖ್ಯ ದಾಖಲೆಗಳಲ್ಲೊಂದಾಗಿದೆ, ಇಂದು ನಾವುಗಳು ಸರ್ಕಾರದ ಯಾವುದೇ ಯೋಜನೆಯ ಲಾಭವನ್ನು ಪಡೆಯಬೇಕೆಂದರೆ ನಮಗೆ Ration Card ( ಪಡಿತರ ಚೀಟಿ) ತುಂಬಾ ಅವಶ್ಯವಾದ ದಾಖಲೆಯಾಗಿದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ಎಲ್ಲಾ ಯೋಜನೆಗಳಲ್ಲಿಯೂ ಅನುದಾನ ಪಡೆಯಲು ಸಹಾಯಕವಾಗಿದೆ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್, ವಸತಿ ಯೋಜನೆಯಡಿ ಉಚಿತ ಮನೆಗಳು, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಇನ್ನೂ ಇತ್ಯಾದಿ ಸರ್ಕಾರದ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ.
ಇನ್ನೂ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಬಂದಾಗಿನಿಂದ ರೇಷನ್ ಕಾರ್ಡ್ ಮಾಡಿಸಲು ಜನರು ಮುಗಿಬಿದ್ದು ಕಾರ್ಡ್ ಮಾಡಿಸಲು ಕ್ಯೂ ನಿಂತಿದ್ದಾರೆ, ಅಂದಿನಿಂದ ರೇಷನ್ ಕಾರ್ಡ್ ಸರ್ವರ್ ಸಮಸ್ಯೆ ತುಂಬಾ ಕಂಡುಬರುತ್ತಿದ್ದು ಜನರು ಕಂಪ್ಯೂಟರ್ ಅಂಗಡಿಗಳ ಮುಂದೆ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೇಷನ್ ಕಾರ್ಡ್ ಮಾಡಿಸಲು ಸರ್ಕಾರವು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಸೆಂಟರ್ ಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ, ಹೊಸ ರೇಷನ್ ಕಾರ್ಡ್ ಗೆ ಹೇಗೆ ಅರ್ಜಿ ಸಲ್ಲಿಸುವುದು? ಮತ್ತು ತಿದ್ದುಪಡಿಯನ್ನು ಹೇಗೆ ಮಾಡುವುದು? ಯಾವ ದಾಖಲೆಗಳು ಬೇಕಾಗಬಹುದು ಎಂದು ಮಾಹಿತಿಯನ್ನು ತಿಳಿದುಕೊಳ್ಳಲು ಮುಂದೆ ಓದಿ.
New Ration Card: ಹೊಸ ರೇಷನ್ ಕಾರ್ಡ್ ಗೆ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ:
ಹೊಸ ರೇಷನ್ ಕಾರ್ಡ್ ಮತ್ತು Ration Card ತಿದ್ದುಪಡಿಗೆ ಅವಶ್ಯವಾದ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಎಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ:
ಆಹಾರ ಇಲಾಖೆಯು ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಕಾರ್ಡನ್ನು ತಿದ್ದಪಡಿ ಮಾಡಿಕೊಳ್ಳಲು ಅಥವಾ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ದಿನಾಂಕ 4 ಡಿಸೆಂಬರ್ ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹೊಸ ರೇಷನ್ ಕಾರ್ಡ್, ತಿದ್ದುಪಡಿ, ಕೆವೈಸಿ ಮುಂತಾದವುಗಳನ್ನು ಅಪ್ಡೇಟ್ ಮಾಡಲು ಅವಕಾಶ ನೀಡಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್ (Adhar Card)
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ (Caste and Income Certificate)
- ಮೊಬೈಲ್ ಸಂಖ್ಯೆ (Mobile Number)
- ರೇಷನ್ ಕಾರ್ಡ್ ಸಂಖ್ಯೆ ( Ration Card Number)
- ಜನನ ಪ್ರಮಾಣ ಪತ್ರ (Birth Certificate )
ಯಾವ್ಯಾವ ಸೇವೆಗಳನ್ನು ಪಡೆಯಲು ಅವಕಾಶ ನೀಡಲಾಗಿದೆ?
- ವಿಳಾಸ ಬದಲಾವಣೆ (Address Change)
- ಹೆಸರು ಸೇರ್ಪಡೆ ( Add Member )
- ಹೆಸರು ಹಿಂಪಡೆಯುವುದು ( Member Delete)
- ಕೆವೈಸಿ (KYC )
- ನ್ಯಾಯಬೆಲೆ ಅಂಗಡಿ ಬದಲಾವಣೆ ( Fair price Shop Change)
ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು?
ಹೊಸ ರೇಷನ್ ಕಾರ್ಡ್ ಅಥವಾ ಪ್ರಸ್ತುತ ಇರುವ ರೇಷನ್ ಕಾರ್ಡ್ ತಿದ್ದಪಡಿಯನ್ನು ನಿಮ್ಮ ಹತ್ತಿರದ ಯಾವುದೇ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅಧೀಕೃತ ವೆಬ್ ಸೈಟ್: https://ahara.karnataka.gov.in
A Step-by-Step Guide to Building Your Website with Hostinger