ಸ್ವಾಮಿ ಬಂದಾನೋ – Swamy Bandano Lyrics – Dr. Rajkumar Devotional Song Lyrics
ಸ್ವಾಮಿ ಬಂದಾನೋ ನಮ್ಮ ಅಯ್ಯಪ್ಪ ಬಂದಾನೋ ಹುಲಿಯನೇರಿ ನಾಡಿನೊಳಗೆ ಸ್ವಾಮಿ ಬಂದಾನೋ ಸೂರ್ಯಚಂದ್ರ ಕಾಂತಿಯುಳ್ಳ ಸ್ವಾಮಿ ದೇವನು ಶಾಂತಿ ಎಂಬ ಮಂದಹಾಸ ಬೀರಿ ಬಂದವನು ಶಿಷ್ಟರಕ್ಷಣೆಗಾಗಿ ನ್ಯಾಯ ಬಿಲ್ಲು ಹೊತ್ತವನು ಸತ್ಯ ಧರ್ಮ ನೀತಿ ಎಂಬ ಬಾಣಹೂಡಿದನು ಸ್ವಾಮಿ ಬಂದಾನೋ ನಮ್ಮ ಅಯ್ಯಪ್ಪ ಬಂದಾನೋ ಜ್ಞಾನಸಾರ ಜ್ಯೋತಿಂಬ ತಿಲಕವಿತ್ತವನೋ ಭಕ್ತಿಸಾರ ಎಂಬ ಮಣಿಯ ಹಾರತೊತ್ತವನೊ ಐಕ್ಯತೆಯ ಸಾರವೆಂಬ ಮುಕುತವಿತ್ತವನೊ ಶರಣು ಎನುವಾ ಜನರಪೊರೆಯೆ ಇಳೆಗೆ ಬಂದವನೋ ಸ್ವಾಮಿ ಬಂದಾನೋ ನಮ್ಮ ಅಯ್ಯಪ್ಪ ಬಂದಾನೋ ಶರಣಂ ಶರಣಂ ಶರಣಂ…
