ಬಾ ಮಲ್ಲಿಗೆ ಬಾ ಮೆಲ್ಲಗೆ – Baa mallige baa mellage Lyrics in Kannada – C Ashwath
Lyrics: Channaveera Kanavi Music: C Ashwath Singers: Srivivas udupa, Indu ಬಾ ಮಲ್ಲಿಗೆ, ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳೆಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳೆಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ♫♫♫♫♫♫♫♫♫♫♫♫♫♫ ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗು ತಂಪೆರಚಿದೆ ನಿನ್ನೆದೆ ಪರಿಮಳವು ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗು ತಂಪೆರಚಿದೆ ನಿನ್ನೆದೆ ಪರಿಮಳವು ತಿಂಗಳ ತನಿ ಬೆಳಕಲಿ ಮೈದೊಳೆದಿಹ ಮನದನ್ನೆ ತಿಂಗಳ ತನಿ ಬೆಳಕಲಿ ಮೈದೊಳೆದಿಹ ಮನದನ್ನೆ ಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನೆ ಬಾ ಮಲ್ಲಿಗೆ, ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ…
