Ondonde bacchitta mathu song Lyrics in Kannada | Inthi ninna preethiya movie song Lyrics

ಚಿತ್ರ: ಇಂತಿ ನಿನ್ನ ಪ್ರೀತಿಯ

ಆಆಆಆಆಆಆ
ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು
ಮೌನ
ಮಾತಾಡು
ಹೇ ಹೇ ಹೇ ……
ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ

♬♬♬♬♬♬♬♬♬♬♬♬♬♬♬♬
ಸುಳ್ಳು ಸುಳ್ಳೇ ಮುನಿಸು

ನೂರು ಕಳ್ಳ ಕನಸು
ಮುಸ್ಸಂಜೆ ಮತ್ತಲ್ಲಿ
ಮುತ್ತಿಟೋರ್ಯಾರು
ಕೆನ್ನೆ ನಿಂದ ಮುತ್ತು ನಂದ
ಬಗೆ ಹರಿಯದ ಒಗಟು ಇದು….

ಹೋಮೊದಲು ಅಪ್ಪಿಕೊಂಡ

ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ
ಪಿಸುಗುಟ್ಟಿದ್ಯಾರು
ವಿರಹದಲಿ ಅಡಗಿದೆಯೋ ಸನಿಹ
ಸನಿಹದಲಿ ಯಾಕಿದೆ ವಿರಹ
ಹೇಳುವೆಯ…….

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ
♬♬♬♬♬♬♬♬♬♬♬♬♬♬♬♬


ಓ.. ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ
ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯಾರು
ತಪ್ಪು ನಿಂದ ತಪ್ಪು ನಂದ
ಕೊನೆಗಾಣದ ಒಗಟು ಇದು

ಮುಂಜಾನೆ ನಿದ್ರೇಲಿ

ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ
ಸುಳ್ಳನ್ನು ಕಲಿಸುವುದೇ ಕನಸು
ಅದನ್ಯಾಕೆ ಬಯಸಿದೆ ಮನಸು
ಹೇಳುವೆಯ……..

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ

Leave a Reply

Your email address will not be published. Required fields are marked *