Nooraaru Kaala Sukhavaagi Baalu Song Lyrics in Kannada – Kashi Kannada Movie – Sudeep


ಚಿತ್ರ: ಕಾಶಿ
ಸಂಗೀತ : Koti
ಗಾಯನ: ರಾಜೇಶ್ ಕೃಷ್ಣನ್, ಮನೋ
ಸಾಹಿತ್ಯ : ಕೆ. ಕಲ್ಯಾಣ್

ಜನುಮ ದಿನ ಅನ್ನೋದು
ಈ ಬದುಕಿನ ನೆನಪು
ಈ ಬದುಕು ಅನ್ನೋದು
ಸವಿ ಪ್ರೀತಿಯ ನೆನಪು

ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತಡೇ
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತಡೆ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತಡೇ
ನೀ ನಡೆಯೋ ದಾರಿಯಲಿ 
ಕನಸುಗಳು ಚೆಲ್ಲಿರಲಿ
ನಿನ್ನೆಲ್ಲ ಕನಸಿನಲಿ ನಮ್ಮ 
ಹರಕೆ ತುಂಬಿರಲಿ

ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತಡೆ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತಡೇ

♫♫♫♫♫♫♫♫♫♫♫♫

ಬಾಳೆಲ್ಲಾ ಹಾಲು ಸುರಿದಂಗೆ
ಪ್ರತಿ ಹೆಜ್ಜೆ ಜೇನು ಹರಿದಂಗೆ
ನನ್ನ ಅಣ್ಣ ನಗುತ ಇದ್ರೆ ಸಾಕು
ಅದೇ ಅಟ್ಯಾಚ್ಮೆಂಟೂ
ಒಂದಿಷ್ಟು ಚಿಂತೆ ಬಾರದಂಗೆ
ಕಣ್ಣೀರು ಕಷ್ಟ ಇಲ್ಲದಂಗೆ
ನನ್ನ ತಮ್ಮ ಮುಂದೆ ಬರಬೇಕು
ಅದೇ ನಮ್ಮ ಸೆಂಟಿಮೆಂಟೂ
ಇಡೀ ಲೋಕವೇ 
ನಮಗೆ ಎದುರಾದರೂ
ಇಂಥ ಸೋದರನ 
ಅನುಭಂದವ ತಡೆಯರು

ಹಾ ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತಡೇ

♫♫♫♫♫♫♫♫♫♫♫♫

ಮನಸಲ್ಲಿ ಮಗುವಿನಂತೆ ನೀನು
ಹೆತ್ತವರ ಕನಸಿನಂತೆ ನೀನು
ಈ ಕಾಶಿ ಕರುಳಿನಂತೆ ನೀನು
ನೀನಂದ್ರೆ ನಂಗಿಷ್ಟಾ
ಅಕ್ಕರೆಯ ತಾಯಿ ತಂದೆ ನೀನು
ದೇವರಿಗೂ ಮೀರಿ ನಿಂತೆ ನೀನು
ಜನುಮಕ್ಕು ನೆರಳಿನಂತೆ ನೀನು
ಅದೇ ನನ್ ಅದೃಷ್ಟ
ನಮ್ಮಾ ಅಮ್ಮನ ಆಸೆ ಒಂದೇನಮ್ಮ
ಇವ ಡಾಕ್ಟರ್ ಆಗಿ ಒಳ್ಳೆ 
ಹೆಸರು ಪಡಿಬೇಕಮ್ಮ

ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತಡೆ
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತಡೇ
ನೀ ನಡೆಯೋ ದಾರಿಯಲಿ 
ಕನಸುಗಳು ಚೆಲ್ಲಿರಲಿ
ನಿನ್ನೆಲ್ಲ ಕನಸಿನಲಿ ನಮ್ಮ 
ಹರಕೆ ತುಂಬಿರಲಿ
ಹೇ…
ಲಲಲಲಾ
ಪಪರಪಪ
ಪಪರಪಪ
ಪಪರಪಪ
ಹೇ ಲಲಲಲಾ

Nooraaru Kaala Sukhavaagi Baalu Song Karaoke by PK Music

Leave a Reply

Your email address will not be published. Required fields are marked *