Nana mele nanageega Song Lyrics – Kannadakkaagi ondannu otti Song Lyrics – ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ

Song: Nana Mele Nanageega
Movie: Kannadakkagi Ondannu Otti
Singer: Sonu Nigam
Music: Arjun Janya
Lyrics: Kushal Gowda
Banner: Edabidangi Talkies.
Label: Pancharangi Audio
Powered by TrendLoud


ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ……
ಬಡಪಾಯಿ ಎದೆಯಲ್ಲಿ ಒಲವೀಗ ಮನೆ ಮಾಡಿದೆ…..
ಸನ್ನೆಯಲ್ಲಿ ಇನ್ನೇನು ಹೇಳುವಾಗ
ಎಲ್ಲಾ ಮಾತು ನನ್ನಲಿ ಬಾಕಿ ಈಗ
ಸರಿ ಹೋಗುವ ಮುನ್ಸೂಚನೆ ಇತ್ತೀಚ್ಚಿಗೆ ಸುಳಿದಾಡಿದೆ….
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಭೇಟಿಯಾದ ಜಾಗ ನಮ್ಮನ್ನೇ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ…..
ಒಂದೇ ಒಂದು ಮಾತು ನೀ ಚಂದವಾಗಿ ಹಾಡಿ
ನನ್ನ ದ್ಯಾನವೆಲ್ಲ ಲೂಟಿ ಮಾಡಿದೆ….
ಉಸಿರಿನ ಬಿಸಿಲು ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ…
ಪದ ಗೀಚುವ ಬೆರಳೆಲ್ಲವು ಪದವಿಲ್ಲದೆ ಪರದಾಡಿದೆ
ಇನ್ನೇಕೆ ಕಾಲಹರಣ ದೂರಾನೆ ತುಂಬಾ ಕಠಿಣ
ಕಣ್ಣಲ್ಲೇ ನೀಡು ಎಲ್ಲ ಸೂಚನೆ
ಎಲ್ಲೇ ಹೋದರೂನು ನೀ ಎಲ್ಲೇ ಬಂದರೂನು.
ನನಗೀಗ ನೀನದೊಂದೇ ಪ್ರಾರ್ಥನೆ
ಜೀವದ ಭಾಷೆ ಹೇಳಲು ನನಗೆ
ಜೀವವೇ ಹೋದ ಹಾಗಾಗಿದೆ
ಅನುರಾಗದ ಅನುವಾದಕೆ ಸರಿ ಹೋಗುವ ಪದವೆಲ್ಲಿದೆ
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಹು ಹುಹುಹು ಹುಂಹು ಹುಹುಹು ಹುಂ

Leave a Reply

Your email address will not be published. Required fields are marked *