ಚಿತ್ರ: ಉಯ್ಯಾಲೆ
ನಗುತಾ ಹಾಡಲೇ
ಅಳುತಾ ಹಾಡಲೇ
ಮನವು ಅಳುತಿರೇ
ಮುಖದಿ ಗೀತೆ ಹಾಡಲೇ
ನಗುತಾ ಹಾಡಲೇ
ಅಳುತಾ ಹಾಡಲೇ
ಮನವು ಅಳುತಿರೇ
ಮುಖದಿ ಗೀತೆ ಹಾಡಲೇ
♬♬♬♬♬♬♬♬♬♬♬♬
ಮುರುಳಿಯೇ ಒಡೆದಿರೆ ಮಧುರನಾದ ನುಡಿಸಲೇ
ಪ್ರೀತಿಯಾ ದಾಹಕೆ ಕಣ್ಣನೀರ ಕುಡಿಸಲೇ
ಗಾಳಿಯಾ ನಡುವೆಯೇ ಪ್ರೀತಿ ದೀಪಾ ಹಿಡಿಯಲೇ
ಏಕೆ ಇಂಥ ಶೋಧನೆ ಎಂದು ವಿಧಿಯಾ ಕೇಳಲೇ
ನಗುತಾ ಹಾಡಲೇ
ಅಳುತಾ ಹಾಡಲೇ
ಮನವು ಅಳುತಿರೇ
ಮುಖದಿ ಗೀತೆ ಹಾಡಲೇ
♬♬♬♬♬♬♬♬♬♬♬♬
ಅಂದಿನ ದಿನಗಳು ಕನಸು ಎಂದು ತಿಳಿಯಲೇ
ಕತ್ತಲೆ ಕಂಡರು ಬೆಳಕು ಎಂದು ಭ್ರಮಿಸಲೇ
ಅಂದಿನ ದಿನಗಳು ಕನಸು ಎಂದು ತಿಳಿಯಲೇ
ಕತ್ತಲೆ ಕಂಡರು ಬೆಳಕು ಎಂದು ಭ್ರಮಿಸಲೇ
ಅಳುವಿಗೆ ನಗುವಿನ ಬಣ್ಣವನ್ನು ಬಳಿಯಲೇ
ಆತ್ಮದ ಬಂಧನ ಅಮರವೆಂದು ಸಾರಲೇ
ನಗುತಾ ಹಾಡಲೇ
ಅಳುತಾ ಹಾಡಲೇ
ಮನವು ಅಳುತಿರೇ
ಮುಖದಿ ಗೀತೆ ಹಾಡಲೇ