Naa kande ninna Madhura Song Lyrics – Krishna Rukmini Songs Lyrics – ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ


ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು ಮೋಹನ ಮುರಳಿ
ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ನಿನ್ನ ಗೆಜ್ಜೆ ಘಲಿರೇನುವಾಗ ನನ್ನ ಹೃದಯ ಹಾಡಿತು ರಾಗ
ನಿನ್ನ ಕಣ್ಣು ಕರೆದಿರುವಾಗ ನನ್ನ ಬಯಕೆ ಪಡೆಯಿತು ಯೋಗ
ಎಲ್ಲಿ ನಿನ್ನ ಇಂಪಿನ ಕೊಳಲೋ ಅಲ್ಲೇ ನನ್ನ ನಾಟ್ಯದ ನವಿಲು
ಎಲ್ಲಿ ನಿನ್ನ ಗೀತದ ಸೆಳೆಯೋ ಅಲ್ಲೇ ನನ್ನ ಪ್ರೀತಿಯ ಹೊನಲು
ಜೀವಭಾವ ಅರಿತು ಬೆರೆತು ರಸಲೀಲ ಬಂಧ
ಜೀವಭಾವ ಅರಿತು ಬೆರೆತು ರಸಲೀಲ ಬಂಧ
ಬಾನ ಕಣ ನಿಂದು ನಲಿದು ಆತ್ಮಾನುಬಂಧ
ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಯಾವ ಜನುಮ ಜನುಮದ ನಂಟು ನನ್ನ ನಿನ್ನ ಮೈತ್ರಿಯ ತಂತು
ನಮ್ಮ ನಲ್ಮೆ ಭಾಗ್ಯದ ಬೆಳಕು ಪ್ರೀತಿಯಾಗಿ ಹರಿಯುತಾ ಬಂತು
ನಿನ್ನ ರೂಪು ಸೆಳೆದಿರುವಾಗ ನೂರು ರೀತಿ ರಂಗಿನ ಭೋಗ
ನಿನ್ನ ಸನಿಹ ಹಿತವಿರುವಾಗ ನನ್ನ ಆಸೆ ಬಯಸಿತು ಸಂಘ
ಮಾತು ಮೌನ ಮೀರಿ ಬೆಳೆದ ಪ್ರೇಮದಾಟ ಚೆಂದ
ಮಾತು ಮೌನ ಮೀರಿ ಬೆಳೆದ ಪ್ರೇಮದಾಟ ಚೆಂದ
ಮೋಹ ದಾಹ ಮೆಟ್ಟಿ ಪಡೆದ ಸ್ವರ್ಗ ಸುಖವೇ ಚೆಂದ
ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು ಮೋಹನ ಮುರಳಿ
ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ ಪಲುಕು ಪಲುಕು ಹೆಜ್ಜೆಯಲಿ

  1. Karnatakada Ithihaasadali
  2. Naadave Nanninda Dooraadeya
  3. Cheluvina Chilume Chimmidaaga
  4. Naa Kande Ninna Madura 
  5. Balukaado Bangaari 
  6. Naada Lola Sri Krishna

Leave a Reply

Your email address will not be published. Required fields are marked *