PK-Music
ಚಿತ್ರ: ಶಂಕರ್ ಗುರು
ರಚನೆ:ಚಿ. ಉದಯಶಂಕರ
ಸಂಗೀತ: ಉಪೇಂದ್ರ ಕುಮಾರ
ಗಾಯನ: ಡಾ. ರಾಜ್ & ಪಿ.ಬಿ.ಎಸ್
ನಾ ಬೆಂಕಿಯಂತೆ
ನಾ ಗಾಳಿಯಂತೆ
ಈ ಜೋಡಿ ಮುಂದೆ
ವೈರಿ ಉಳಿಯುವನೆ
ನಾ ಬೆಂಕಿಯಂತೆ
ನಾ ಗಾಳಿಯಂತೆ
ಈ ಜೋಡಿ ಮುಂದೆ
ವೈರಿ ಉಳಿಯುವನೆ
♬♬♬♬♬♬♬♬♬♬♬♬
ಸೂರ್ಯ ಬಾನಿಂದ
ಓಡಿ ಬಂದಂತೆ
ನೀನು ಬಂದಾಗ ನನಗಾಯ್ತು
ಮಿಂಚು ಮೇಲಿಂದ
ಜಾರಿ ಬಂದಂತೆ
ನಿನ್ನ ಕಂಡಾಗ ನನಗಾಯ್ತು
ಒಂದೇ ಬಳ್ಳಿ ತಂದ
ಜೋಡಿ ಹೂವು ನಾವು
ಹಾ.
ಒಂದೇ ಬಳ್ಳಿ ತಂದ
ಜೋಡಿ ಹೂವು ನಾವು ಹಾ ಹಾ ಹ
ನಾ ಬೆಂಕಿಯಂತೆ
ನಾ ಗಾಳಿಯಂತೆ
ಈ ಜೋಡಿ ಮುಂದೆ
ವೈರಿ ಉಳಿಯುವನೆ
♬♬♬♬♬♬♬♬♬♬♬♬
ಸ್ನೇಹ ಕಂಡಾಗ
ಪ್ರೀತಿ ಬಂದಾಗ
ನಾವು ಹೂವಾಗಿ ಸೇರೋಣ
ದ್ವೇಷ ಕಂಡಾಗ
ರೋಷ ಬಂದಾಗ
ಜೋಡಿ ಹಾವಾಗಿ ಬೀಳೋಣ
ಸೋಲೋ ಮಾತೆ ಇಲ್ಲ
ಹ ಹ್ ಗೆಲುವೇ ಇನ್ನು ಎಲ್ಲ
ಸೋಲೋ ಮಾತೆ ಇಲ್ಲ
ಗೆಲುವೇ ಇನ್ನು ಎಲ್ಲ
ಹಾ ಹಾ ಹ
ನಾ ಬೆಂಕಿಯಂತೆ
ನಾ ಗಾಳಿಯಂತೆ
ಈ ಜೋಡಿ ಮುಂದೆ
ವೈರಿ ಉಳಿಯುವನೆ
ನೀ ಬೆಂಕಿಯಂತೆ
ನೀ ಗಾಳಿಯಂತೆ
ಈ ಜೋಡಿ ಮುಂದೆ
ವೈರಿ ಉಳಿಯುವನೆ