Mungaru Male Dialogue in Kannada – Ganesh – Yogaraj bhat – Pooja gandhi


Film:

Mungaru Male    

Music:

ManoMurthy    

Dialogue:

Yogaraj Bhat

Director:

Yogaraj Bhat

Artists:

Golden Star Ganesh, Pooja Gandhi

Year

2006

ರೀ ಇಂತ ಒಳ್ಳೆ ಸಮಯದಲ್ಲಿ ಟೈಮ್ ಬಗ್ಗೆ ಯಾಕ್ರೀ ಮಾತಾಡ್ತೀರಾ..?

ರೀ ಟೈಮ್ ಅನ್ನೋದು ಪಕ್ಕ 420

ಟೈಮ್ ಇರೋದೆ ಕೈ ಕೊಡೋಕ್ರಿ

ನೋಡಿ ನೀವು ನನಗೆ ಸಿಕ್ಕೇ ಸಿಕ್ತೀರಾ

ನಮಗೂ ನಿಮಗೂ ಮದುವೆ ಆಗಿ

1 ಡಜನ್ ಮಕ್ಕಳಾಗೋ ಟೈಮ್ ಬರುತ್ತೆ ಅನ್ಕೊಂಡೆ

ಆದ್ರೆ ಟೈಮ್ ಬರ್ಲೇ ಇಲ್ಲ

ನೀವು ನನ್ನ ಗಟ್ಟಿ ಯಾಗಿ ತಬ್ಕೊಂಡು ಒಂದು ವರೆ ಲೀಟರ್ ಕಣ್ಣೀರ್ ಸುರ್ಸಿ

ನಿಮ್ ಬಿಟ್ಟು ಇನ್ಯಾರತ್ರಾನು ತಾಳಿ ಕಟ್ಟಿಸ್ಕೊಳಲ್ಲ

ನೀವೇ ನನಗೆ ಸರಿಯಾದ ಜೋಡಿ ಅಂತ ಹೇಳೋ ಟೈಮ್ ಬರುತ್ತೆ ಅನ್ಕೊಂಡೆ

ಆದ್ರೆ ಟೈಮ್ ಬರ್ಲೇ ಇಲ್ಲ

ಮನ್ಸಂಗೆ ಬ್ಯಾಡ್ ಟೈಮ್ ಶುರು ಆದ್ರೆ ತಲೆ ಕೆರ್ಕೊಂಡು

ತಲೆಲಿ ಗಾಯ ಆಗಿ ಗಾಯ ಕ್ಯಾನ್ಸರ್ ಆಗಿ, ಡಾಕ್ಟರ್ ತಲೆನೇ ತೆಗೀಬೇಕು ಅಂತಾರೆ ಅಂತದ್ರಲ್ಲಿ ನಾನು ದಿಲ್, ಹೃದಯ, ಹಾರ್ಟ್ ಅಂತಾರಲ್ಲ, ಅದಕ್ಕೆ ಕೈ ಹಾಕಿ ಪರ ಪರ ಅಂತ ಕೆರ್ಕೊಂಡು ಬಿಟ್ಟಿದೀನಿ ಕಣ್ರೀ.

ನಿಮ್ಮ ನಗು, ನಿಮ್ಮ ಬ್ಯೂಟೀ, ನಿಮ್ಮ ವಾಯ್ಸು, ನಿಮ್ಮ ಕೂದ್ಲು, ನಿಮ್ಮ ನೋಟ,

ಬಿಕನಾಸಿ ಮಳೆ, ನಿಮ್ಮ ಗೆಜ್ಜೆ ಸದ್ದು, ವಾಚು, ರಾಸ್ಕಲ್ ದೇವ್ದಾಸ್ ಗಂಟೆ ಸದ್ದು

ಎಲ್ಲ ಮಿಕ್ಸ್ ಆಗಿ ನಂ ಲೈಫ್ ಅಲ್ಲೇ ರಿಪೇರಿ ಮಾಡಕ್ಕಾಗದೆ ಇರೋ ಅಷ್ಟು ದೊಡ್ಡ ಗಾಯ ಮಾಡಿದೆ ದರಿದ್ರ ಹಾರ್ಟಲ್ಲಿ

ನಂಗೊತ್ತಾಗೋಯ್ತು ಕಣ್ರೀ ನೀವು ನನಗೆ ಸಿಗೋಲ್ಲ ಅಂತ

ಬಿಟ್ಕೊಟ್ಬಿಟ್ಟೆ ಕಣ್ರೀ

ನಿಮ್ಮನ್ನ ಪಟಾಯ್ಸಿ ಲೋಫರ್ ಅನಿಸ್ಕೊಳ್ಳೋದಕ್ಕಿಂತ

ಒಬ್ಬ ಡೀಸೆಂಟ್ ಹುಡುಗನಾಗಿ ಇದ್ಬಿಟ್ರೆ ಸಾಕು ಅನ್ನಿಸ್ಬಿಟ್ಟಿದೆ ಕಣ್ರೀ

ಆದ್ರೆ ಒಂದ್ ವಿಷ್ಯ ತಿಳ್ಕೊಳ್ಳಿ

ನನ್ನಷ್ಟು ನಿಮ್ಮನ್ನ ಇಷ್ಟ ಪಡೋರು ಭೂಮಿಲೆ ಯಾರು ಸಿಗಲ್ಲ ಕಣ್ರೀ

 

ಲೈಫಲ್ಲಿ ಲೆವಲ್ಲಿಗೆ ಕನ್ಫ್ಯೂಸ್ ಆಗಿದ್ದು ಇದೆ ಮೊದಲು  ಎಲ್ಲ ನಿಮ್ ಆಶೀರ್ವಾದ.

 

ಥ್ಯಾಂಕ್ಸ್ ಕಣ್ರೀ ನಂದಿನಿ

ಪ್ರೀತಿ ವಿಷ್ಯದಲ್ಲಿ ನನ್ ಕಣ್ಣ್ ತೆರೆಸಿದ ದೇವತೆ ಕಣ್ರೀ ನೀವು

ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ ಮೇಲು,

ನಾನ್ ಉಪಕಾರನ ಮರ್ಯಲ್ಲ ರೀ

ನೀವ್ ಸಿಗಲ್ಲ ಅಂತ ಅಂತ ನಂಗೇನೂ ಬೀಜಾರ್ ಇಲ್ಲ ರೀ

ನಿಮ್ ಜೊತೆ ಕಳೆದೆನಲ್ಲ ನಾಲಕ್ ದಿವಸ

ಅಷ್ಟು ಸಾಕು ಕಣ್ರೀ….

ಆದನ್ನೇ ರೀವೈಂಡ್ ಮಾಡ್ಕೊಂಡು ಹೇಗೋ ಜೀವನ ತಳ್ಳಿ ಬಿಡ್ತೀನಿ

 

ತುಂಬಾ ನೋವಾಗುತ್ರಿ

ಆದ್ರೆ ನೋವಲ್ಲೂ ಒಂಥರಾ ಸುಖ ಇದೆ

ಸ್ವೀಟ್ ಪೇನ್  ಸ್ವೀಟ್ ಮೆಮೊರೀಸ್

ಜೊತೆಗೆ ಹಾಟ್ ಡ್ರಿಂಕ್ ಲೋಕಲ್

ನೀರ ಕೈ ಅಲ್ಲಿದ್ರೆ ದೂಸ್ರಾ ಮ್ಯಾಟರ್ ಇಲ್ಲ ಕಣ್ರೀ

 

Leave a Reply

Your email address will not be published. Required fields are marked *