PK-Music
ಸಾಹಿತ್ಯ:
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ:
ರಾಘವೇಂದ್ರ ಬೀಜಾಡಿ
ಗಾಯನ:
ರಾಘವೇಂದ್ರ ಬೀಜಾಡಿ
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ
ಜಗವೆ ಸೋತು
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ
ಜಗವೆ ಸೋತು
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ
ಹೃದಯ ಕೇಳಲಿ ಈಗ ಬಳಿಯೆ ಕೂತು
ಹೃದಯ ಕೇಳಲಿ ಈಗ ಬಳಿಯೆ ಕೂತು
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ
ಜಗವೆ ಸೋತು
♬♬♬♬♬♬♬♬♬♬♬♬
ಮೆಚ್ಚಿಸುವ ಹಂಗಿಲ್ಲವಂಚನೆಯ ಸೊಂಕಿಲ್ಲ
ತನ್ನ ಹಮ್ಮನು ಮೆರೆಸೋ ಹಂಬಲವು ಇಲ್ಲ
ಮೆಚ್ಚಿಸುವ ಹಂಗಿಲ್ಲವಂಚನೆಯ ಸೊಂಕಿಲ್ಲ
ತನ್ನ ಹಮ್ಮನು ಮೆರೆಸೋ ಹಂಬಲವು ಇಲ್ಲ
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ
ಎದೆಗೊಳವು ಕದಡುವ ಭಯವು ಇಲ್ಲ
ಎದೆಗೊಳವು ಕದಡುವ ಭಯವು ಇಲ್ಲ
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ
ಜಗವೆ ಸೋತು
♬♬♬♬♬♬♬♬♬♬♬♬
ಮರೆತು ಹೋಗಲಿ ಹಾಡು
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು
ನಿನ್ನೊಂದಿಗಿರು ನೀನು
ಮರೆತು ಹೋಗಲಿ ಹಾಡು
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು
ಕೋಶದೊಳಗೇ ಕೂತು
ಕಾಯುವ ಸಹನೆಗೆ
ಕೋಶದೊಳಗೇ ಕೂತು
ಕಾಯುವ ಸಹನೆಗೆ
ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು
ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ
ಜಗವೆ ಸೋತು
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ
ಜಗವೆ ಸೋತು
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ
ಹೃದಯ ಕೇಳಲಿ ಈಗ ಬಳಿಯೆ ಕೂತು
ಹೃದಯ ಕೇಳಲಿ ಈಗ ಬಳಿಯೆ ಕೂತು
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ
ಜಗವೆ ಸೋತು