Maharina Mahanadi Song Lyrics in Kannada – Arive Ambedkar

PK-Music


ಹಾಡು:
ಮಹಾರಿನ ಮಹಾನದಿ

ಕಾರ್ಯಕ್ರಮ:
ಮರಳಿ ಬಾ

ಗಾಯಕರು:
ಜಾನಿ

ಸಂಗೀತ:
ಎಂ ಎಸ್ ಮಾರುತಿ

ಸಾಹಿತ್ಯ:
ಎನ್ ಕೆ ಹನುಮಂತಯ್ಯ


ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುಗಳ ಎದೆಮೇಲು

ಮಲಗುವ ನಿದ್ರೆಗಳೇ

ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುಗಳ ಎದೆಮೇಲು

ಮಲಗುವ ನಿದ್ರೆಗಳೇ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುವಿನ ಎದೆಮೇಲು

ಮಲಗುವ ನಿದ್ರೆಗಳೇ

♬♬♬♬♬♬♬♬♬♬♬♬

ಹಗಲು ಇರುಳು ಉರಿಯುತ್ತಿರುವ

ಕುಲದ ಕುಲುಮೆ ನಂದಿಸಿ

ಹಗಲು ಇರುಳು ಉರಿಯುತ್ತಿರುವ

ಕುಲದ ಕುಲುಮೆ ನಂದಿಸಿ

ಬೆಂದು ಕೆಂಡವಾಗುತ್ತಿರುವ

ಜೀವಗಳ ಉಳಿಸಿ

ಜಲವುಬತ್ತಿ ನೆಲವು ಹೊತ್ತಿ

ದಗದಗಿಸುವ ಮುನ್ನವೇ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುಗಳ ಎದೆಮೇಲು

ಮಲಗುವ ನಿದ್ರೆಗಳೇ

♬♬♬♬♬♬♬♬♬♬♬♬

ಹೊಲಸು ಎಂಬ ವಿಷದ ತೊಗಲ

ತನು ಮನಕೆ ಮೆತ್ತದಿರಿ

ಹೊಲಸು ಎಂಬ ವಿಷದ ತೊಗಲ

ತನು ಮನಕೆ ಮೆತ್ತದಿರಿ

ಕಣ್ಣ
ಅಗಲ
ಗರ್ಭ ತುಳಿದು

ನೆತ್ತರನ್ನು ಚೆಲ್ಲದಿರಿ

ಕಾಡು ಕಣಿವೆ ಕಡಲು ಕೊಳೆತು

ದಗದಗಿಸುವ ಮುನ್ನವೇ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುಗಳ ಎದೆಮೇಲು

ಮಲಗುವ ನಿದ್ರೆಗಳೇ

♬♬♬♬♬♬♬♬♬♬♬♬

ಮಹಾರಿನ ಮಹಾನದಿ

ನಮ್ಮ ನಿಮ್ಮ ಪ್ರಾಣನದಿ

ಮಹಾರಿನ ಮಹಾನದಿ

ನಮ್ಮ ನಿಮ್ಮ ಪ್ರಾಣನದಿ

ಅಕ್ಷರದ ಹನಿ ಹನಿಯಲಿ

ಉಕ್ಕಿಹರಿದ ಪ್ರೇಮ ನದಿ

ಬಿಡುಗಡೆಯ ಹಸಿರು ಉಸಿರ

ಬುದ್ಧ ನಗೆಯ ತಾಯಿ ನದಿ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುಗಳ ಎದೆಮೇಲು

ಮಲಗುವ ನಿದ್ರೆಗಳೇ

ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುಗಳ ಎದೆಮೇಲು

ಮಲಗುವ ನಿದ್ರೆಗಳೇ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ದನಿಯ ಆಲಿಸಿ

ನದಿಯ ದನಿಯ ಆಲಿಸಿ

ಪರ್ವತದ ಪಾದಗಳೇ

ಸಿಡಿಲಿನ ಸ್ಪರ್ಶಗಳೇ..

ಶಿಶುಗಳ ಎದೆಮೇಲು

ಮಲಗುವ ನಿದ್ರೆಗಳೇ

 

Leave a Reply

Your email address will not be published. Required fields are marked *