LIC Bima Sakhi Yojana: ಮೋದಿಯ ಬಿಮಾ ಸಖಿ ಯೋಜನೆ.

LIC-Bima-Sakhi-Yojana

LIC Bima Sakhi Yojana: ಮಹಿಳೆಯರಿಗೆ ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ.!

LIC LIC Bima Sakhi Yojana ಬಿಮಾ ಸಖಿ ಯೋಜನೆಯು ಭಾರತದ ನಂ. 1 ವಿಮಾ ಕಂಪನಿಯಾದ LIC ಕಂಪನಿಯ ವತಿಯಿಂದ ಭಾರತದ ಮಹಿಳೆಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯು ಯಾರಿಗೆಲ್ಲಾ ಅನ್ವಯಿಸಲಿದೆ, ಅರ್ಜಿಯನ್ನು ಹೇಗೆ ಸಲ್ಲಿಸಬೇಕು, ಯಾವೆಲ್ಲಾ ದಾಖಲೆಗಳು ಬೇಕು, ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಲೇಖನವನ್ನು ಪೂರ್ತಿ ಓದಿ ಪೂರ್ತಿ ವಿವರಗಳನ್ನು ತಿಳಿದುಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ Notification ನಿಮಗೆ ತಿಳಿಯಲು ನಮ್ಮ ಟೆಲಿಗ್ರಾಂ ಚಾನಲ್ ಅನ್ನು ಫಾಲೋ ಮಾಡಿ.

            “ಸಮೃದ್ಧ ನಾರಿ ಶಕ್ತಿ ವಿಕಶಿತ ಭಾರತ” ಎಂಬ ಟ್ಯಾಗ್ ಲೈನ್ ನೊಂದಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್.ಐ.ಸಿಯ ವತಿಯಿಂದ ಬಿಮಾ ಸಖಿ ಯೋಜನೆಯನ್ನು ಹೊರತಂದಿದ್ದು. ಭಾರತದ ಮಹಿಳೆಯರು ಸ್ವಾವಲಂಭಿಗಳಾಗಿ ಬದುಕಲು Bima Sakhi ಯೋಜನೆಯಡಿ ಮಹಿಳೆಯರು LIC ಏಜೆಂಟ್ (Agent) ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ, ಈ ಯೋಜನೆಯಡಿ ಮಹಿಳೆಯರು Part Time ( ಪಾರ್ಟ್ ಟೈಮ್ ) ಅಥವಾ Full Time ( ಫುಲ್ ಟೈಮ್ ) ನಲ್ಲಿ ಕೆಲಸ ಮಾಡಲು LIC Agent ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ, ಈ ಕೆಲಸಕ್ಕೆ ಮಹಿಳೆಯರಿಗೆ ಪ್ರತಿ ತಿಂಗಳು 7000 ರೂಗಳನ್ನು ವೇತನವನ್ನು ನೀಡಲಾಗುತ್ತದೆ ಜೊತೆಗೆ ತಮ್ಮ ಕೆಲಸಕ್ಕೆ ಕಮಿಷನ್ ಪಡೆಯಬಹುದಾಗಿದೆ.

LIC Bima Sakhi Yojana – ಬಿಮಾ ಸಖಿ ಯೋಜನೆಯ ಮಾಹಿತಿ:

ಈ ಯೋಜನೆಯು ಕೇಂದ್ರ ಸರ್ಕಾರ ಮತ್ತು LIC ಯ ಸಹಯೋಗದಲ್ಲಿ ಭಾರತದ ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು LIC Insurance Agent ಆಗಲು ಅವಕಾಶ ಮಾಡಿಕೊಡಲಾಗಿದೆ. ಈ ಉದ್ಯೋಗಕ್ಕೆ ಆಯ್ಕೆಯಾದವರಿಗೆ ಸರ್ಕಾರವೇ ತರಬೇತಿಯನ್ನು ನೀಡಿ ಉದ್ಯೋಗವನ್ನು ಕಲ್ಪಿಸಿಕೊಡಲಾಗುತ್ತದೆ. ಭಾರತ ಸರ್ಕಾರವು ಮೂರು ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಬಿಮಾ ಸಖಿಯರಿಗೆ ಉದ್ಯೋಗವನ್ನು ಕಲ್ಪಿಸಿಕೊಡಬೇಕೆಂಬ ಗುರಿಯನ್ನು ಹೊಂದಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.? – LIC Bima Sakhi Yojana

 ಎಲ್ ಐ ಸಿ ಯ ಈ ಯೋಜನೆಗೆ ಭಾರತದ ಎಲ್ಲಾ ಗ್ರಾಮೀಣ ಮತ್ತು ನಗರದ ಪ್ರದೇಶದಲ್ಲಿ ವಾಸಿಸುವ ವಯಸ್ಕ ಮಹಿಳೆಯರು ಅರ್ಜಿ ಸಲ್ಲಿಸಿ LIC ಏಜೆಂಟ್ ಆಗಬಹುದು. ನಿಗದಿ ಪಡಿಸಿದ ವಿದ್ಯಾರ್ಹತೆ, ನಿಗದಿ ಪಡಿಸಿದ ವಯಸ್ಸು ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು.? – LIC Bima Sakhi Yojana

LIC ಕಂಪನಿಯು, ಬಿಮಾ ಸಖಿ ಯೋಜನೆಯ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕೆಂಬ ಮಾನದಂಡವನ್ನು ಹೊರಡಿಸಿದೆ. ಅರ್ಜಿಯನ್ನು ಸಲ್ಲಿಸುವಾಗ SSLC ಅಂಕಪಟ್ಟಿಯು ಕಡ್ಡಾಯವಾಗಿರುತ್ತದೆ.

ಅರ್ಜಿ ಸಲ್ಲಿಸಲು ವಯೋಮಿತಿ ಏನು.? -LIC Bima Sakhi Yojana

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 70 ವರ್ಷದವರೆಗಿನ ವಯೋಮಿತಿ ಹೊಂದಿರುವ ಎಲ್ಲಾ ಮಹಿಳೆಯರು ಈ ಯೋಜನೆಯ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.

ವೇತನದ ಮಾಹಿತಿ:

ಈ ಯೋಜನೆಯ ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲನೇ ವರ್ಷ ಮಾಸಿಕ 7 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಎರಡನೇ ವರ್ಷ ಮಾಸಿಕ 6 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಮೂರನೇ ವರ್ಷ ಮಾಸಿಕ 5 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ LIC Agent ಗಳು ತಾವು ಮಾಡಿಸಿದ ಇನ್ಶೂರೆನ್ಸ್ ಗಳಿಗೆ ಕಮಿಷನ್ ಮತ್ತು ಬೋನಸ್ ಅನ್ನು ಪಡೆಯಬಹುದು

            ಮೊದಲನೇ ವರ್ಷದ ವೇತನ: 84,000 ರೂಗಳು

            ಎರಡನೇ ವರ್ಷದ ವೇತನ: 72,000 ರೂಗಳು

            ಮೂರನೇ ವರ್ಷದ ವೇತನ: 60,000 ರೂಗಳು

ಜೊತೆಗೆ ತಾವು ಮಾಡಿಸಿದ ಪ್ರತಿ ಪಾಲಿಸಿಗಳಿಗೆ ಕನಿಷ್ಠ 2000 ರೂಗಳು ಕಮಿಷನ್ ಮತ್ತು ಬೋನಸ್ ಪಡೆಯಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • SSLC ಅಂಕಪಟ್ಟಿ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ಸಂಖ್ಯೆ

ಆಯ್ಕೆಯ ವಿಧಾನ:

ಅರ್ಜಿ ಸಲ್ಲಿಸುವ ಪ್ರತಿ ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳನ್ನು ಇರಿಸಿಕೊಳ್ಳಬೇಕು, ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ನಮೂನೆಯ ಜೊತೆಗೆ ದಾಖಲೆಯ ಪರಿಶೀಲನೆ ಮಾಡುತ್ತಾರೆ. ದಾಖಲೆಗಳು ಹೊಂದಾಣಿಕೆಯ ನಂತರ ಅವರು ನೀಡುವ ತರಬೇತಿಗೆ ಹಾಜರಾಗಿ ತರಬೇತಿಯನ್ನು ಪಡೆಯಬೇಕು ನಂತರ IRDAI ನ ಅರ್ಹತಾ ಪರೀಕ್ಷೆಯಲ್ಲಿ ಅವರು ನಿಗಧಿ ಪಡಿಸಿದ ಕನಿಷ್ಠ ಅಂಕವನ್ನು ಪಡೆದು ಉತ್ತೀರ್ಣರಾಗಬೇಕು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವ ಮುನ್ನ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು. ಆನ್ ಲೈನ್ ನಲ್ಲಿಯೇ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು. ಮೊದಲು LIC ಯ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀಡಿರುವ ಮಾಹಿತಿಗಳನ್ನು ಪೂರ್ತಿಯಾಗಿ ಓದಿ ನಂತರ ಅಲ್ಲಿ ಸೂಚಿಸುವ ಹೆಸರು, ವಿಳಾಸ ಮುಂತಾದ ಮಾಹಿತಿಯನ್ನು ಸರಿಯಾಗಿ ಟೈಪ್ ಮಾಡಿ ಅರ್ಜಿಯನ್ನು Submit ಮಾಡಬಹುದು.

ಅರ್ಜಿ ಸಲ್ಲಿಸುವ ಲಿಂಕ್: https://licindia.in/lic-s-bima-sakhi

Read Also:

2025 ರಲ್ಲಿ ಈ 3 Skills ಗಳನ್ನು ಕಲಿಯಿರಿ – Best Skill to Learn to Make Money

ಮುಂದಿನ 10 ವರ್ಷದ ಅವಧಿಗೆ ಉತ್ತಮ ಷೇರುಗಳು- Best Stocks

Leave a Reply

Your email address will not be published. Required fields are marked *