Program: Haadandra Iva Khare Haada
Singer: Gururaj Hosakote, Rajguru Hosakote
Music Director: M. S. Maruthi
Lyricist: Gururaj Hosakote
Music Label : Lahari Music
ಕಲಿತ
ಹುಡುಗಿ ಕುದುರಿ ನಡಗಿ ನಡದು ಬರತಿತ್ತ
ಅದನ್ನು
ಕಂಡ ನಮ್ಮ ಹಳ್ಳಿಮಂದಿಗೆ ದಿಕ್ಕ ತಪ್ಪಿಹೋತ
ಉಟ್ಟ
ಸೀರೆಯ ಕೆಳಗಿನ ದಡಿಯ ಕಸಾ ಹೊಡೆಯುತ್ತಿತ್ತ
ಮುನಸೀಪಾಲ್ಟಿ
ಆಳಿನಕಿಂತ ಸ್ವಚ್ಛ ಮಾಡುತ್ತಿತ್ತ
ಜುಲುಪಿ
ಬಿಟ್ಟ ಹಿಂಡ ರಿಬ್ಬನ್ನು ಬಾಚಿ ಕಟ್ಟಿತ್ತಾ
ಭರ್ರಂತ
ನಡಿಯೋದ್ರಾಗ ರಿಬ್ಬನ್ನು ಢಿರಕಿ ಹೊಡಿತಿತ್ತಾ
ಬಣ್ಣದ
ಮುಖಕ ಬಡಿದ ಪೌಡರು ಹಾರ್ಯಾರಿ ಬರುತಿತ್ತಾ
ಹಣೆಗೆ
ಹಚ್ಚಿದ ಕುಂಕುಮ ಸಣ್ಣಗ ಹಣಿಕಿ ಹಾಕತಿತ್ತಾ
ಬಳೆಯಿಲ್ಲದ
ಬಲಗೈಯಂತೂ ಬಣಬಣ ಅಂತಿತ್ತಾ
ಎಡಗೈಯಾಗ
ರಿಷ್ಟವಾಚ್ ಬಡಿದು ಕುಂತಿತ್ತಾ
ಎತ್ತರ
ಹಿಮ್ಮಡಿ ಚಪ್ಪಲ್ಲೊಮ್ಮೊಮ್ಮೆ ತೊಡ್ರಗಾಲ ಬಡಿತಿತ್ತಾ
ಮೊಳಕೈಗೊಂಡು
ರೊಕ್ಕದ ಪರ್ಸ್ ಜೋತು ಬಿದ್ದಿತ್ತಾ
ಕಣ್ಣಿನ
ನೋಟಕ ಕಾಲಿನ ತಾಳಕ ಎಲ್ಲಿಯ ಪುರುಸೊತ್ತಾ
ಬಳ್ಳಿಯಾಂಗ
ಬಳುಕೂ ನಡುವ ನರ್ತನ ನಡೆಸಿತ್ತಾ
ಕಮ್ಮಾರ
ಹುಡುಗ ಕಬ್ಬಿಣಾ ಕಾಸಿ ಬಡಕೊಂಡ ಕುಂತಿತ್ತಾ
ಹಾದು
ಹೋಗುವ ಹುಡುಗಿಮ್ಯಾಗ ಅವನ ನೆದರ ಬಿತ್ತ
ಮ್ಯಾಲ
ಎತ್ತಿದ ಕಬ್ಬಿಣ ಸುತ್ತಿಗೆ ಪಟ್ಟಂತ ಕೆಳಗ ಬಿತ್ತ
ಕಬ್ಬಿಣ
ಮ್ಯಾಗ ಕುಂದ್ರೋ ಹೊಡತಾ ಕೈಯಮ್ಯಾಲ ಬಿತ್ತ
ಕುಂಬಾರ
ಹುಡುಗಾ ಗಿಡಿಗಿ ಮಾಡಾಕ ಮಣ್ಣ ಕಲಸತಿತ್ತಾ
ಚಕ್ಕಂತ
ಬಂದ ಹುಡುಗಿ ಮ್ಯಾಲ ಬಿತ್ತ ಅವನ ಚಿತ್ತ
ಬುಡುಕ
ಕುಂತ ಹುಡುಗನ ಹೆಂಡತಿ ನೀರ ಬೆರಸತಿತ್ತ
ಹೆಂಡತಿ
ಖಬರ ಇಲ್ಲದ ತುಳದಾನ ಸೊಂಟ ಮುರುದ ಬಿತ್ತ
ಮ್ಯಾದರ
ಹುಡುಗ ಮೆಳ್ಳಗಣ್ಣೆಲೆ ಬಿದರ ಸೀಳತಿತ್ತ
ಮೂಲಿ
ಹೊರಳಿ ಹುಡುಗಿ ಹೋಗುವಾಗ ಅವನ ಕಣ್ಣ ಬಿತ್ತ
ಬಿದರ
ಸೀಳಿ ಎರಡೋಳಾಗಿದ್ದರು ಚೂರಿ ಸೀಳಿ ಬಂತ
ಬಟ್ಟ
ಕತ್ತರಿ ಬಿದ್ದರೂ ಅವಗಾಗಲಿಲ್ಲ ಗೊತ್ತ
ಶೆಟ್ಟರ
ಹುಡುಗ ಯಾಲಕ್ಕಿ ತೂಗಾಕ ಚಕ್ಕಡಿ ಹಿಡಿದಿತ್ತ
ಗಿರಾಕಿ
ಕೂಡ ಮಾತಾಡುವಾಗ ಹುಡುಗಿ ಎದುರು ಬಂತ
ಯಾಲಕ್ಕಿ
ತೂಗು ಹಾಕುವ ಕೈಯಾ ಹಾಕೇ ಹಾಕುತಿತ್ತಾ
ಹುಡುಗಿ
ಗುಂಗಿನಾಗ ಯಾಲಕ್ಕಿ ಡಬ್ಬಿ ಖಾಲಿ ಹೋಗಿ ಹೋತಾ
ಸಿಂಪಿಗ್ಯಾರ
ಹುಡುಗ ಅಂಗಿ ಹೊಲಿದು ಕಿಸೆ ಹಚ್ಚತಿತ್ತ
ಕಿಸೆ
ಕತ್ತರಿಸಿ ಹಚ್ಚೊಮುಂದ ಹುಡುಗಿ ಎದುರುಬಂತ
ಹುಡುಗಿನ
ನೋಡಿನ ಹುಡುಗನ ಅಳತಿ ಹೇರ ಪೇರ ಆತ
ಎದೆಗೆ
ಹಚ್ಚು ಕಿಸಾದ ತುಕುಡಿ ಡುಬ್ಬಕ ಹಚ್ಚಿತ್ತ
ಪೂಜಾರ
ಹುಡುಗ ಹನುಮಂತ ದೇವರ ಪೂಜೆಗೆ ನಡದಿತ್ತ
ಪೂಜಿವ್ಯಾಳೆ
ಮೀರಿ ಹೋಗೈತಂತ ಗಡಬಡ ಸೊಂಟಿತ್ತ
ಬೆಕ್ಕು
ಅಡ್ಡ ಹಾದು ಹೋಗುವಂಗ ಹುಡುಗಿ ಅಡ್ಡ ಬಂತ
ಪೂಜಾ
ಮರೆತು ಬಾಯಿ ತೆರೆದು ನಿಂತು ಜೊಲ್ಲ ಸೋರತಿತ್ತ
ಬಡಿಗ್ಯಾರ
ಹುಡುಗ ಆಳಿನ ಕೂಡ ಉಜ್ಜಗೊಡ್ಡ ಹೊಡಿತಿತ್ತ
ಕೊಡ್ಡದ
ಮ್ಯಾಲ ಉಚ್ಚಗೊಡ್ಡು ಹಿಂದ ಮುಂದಾಗತಿತ್ತ
ಬಡಗ್ಯಾನ
ಮರೆತು ಆಳು ಆ ಹುಡುಗಿನ ಡೊಗ್ಗಿ ನೋಡಿತ್ತ
ಹುಡುಗ್ತಿ
ಲಕ್ಷ್ಯಕ್ಕ ಆಳಿನ ಡುಬ್ಬಾ ಕೆತ್ತಿ ಕೆತ್ತಿ ಹೋತಾ
ಚಾದ
ಅಂಗಡಿ ಹೊರಗ ಆಳೊಂದು ಭಜಿ ಮಾಡತಿತ್ತ
ಭಜಿ
ಮಾಡಿ ಮಾಡಿ, ಹಾಕುವಾಗ ಹುಡುಗಿ ಹಾದ ಹೋತ
ಹುಡುಗಿನ
ನೋಡಿದ ಆಳು ಹುಡುಗನ ಜೀವ ಝಲ್ ಅಂತ
ಹಿಟ್ಟಿನ
ಬುಟ್ಯಾಗ ಹಾಕುವ ಕೈಯಾ ಎಣ್ಣೆಗೆ ಹಾಕಿತ್ತ
ನಾದಿಗಾರ
ಹುಡುಗನ ಮುಂದೊಂದು ಹಣ್ಣಣ್ಣ ಮುದುಕ ಕುಂತಿತ್ತ
ಹುಡುಗನ
ಕತ್ತಿ ಮುದುಕನ ಮೀಸೆ ಕಟ್ ಮಾಡುತಿತ್ತ
ಹಾದಿಲೆ
ಹೋಗುವ ಹುಡುಗಿನ ನೋಡ್ತಾ ಮುದುಕನ್ನ ಮರೆತ
ಲೇ
ಅಂತ ಒದರುವಾಗ ಮೂಗು ಜಿಗಿದು ಬಿತ್ತ