ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನಿನ್ನಿಂದ ನನ್ನ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ….
ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನಿನ್ನಿಂದ ನನ್ನ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ..
ಕಾಲವನ್ನು ತಡೆಯೋರು ಯಾರು ಇಲ್ಲ
ಊರೊಂದೂ ಏತಕೆ ಬೇಕೂ
ಮನೆಯೊಂದೂ ಏಕಿರಬೇಕೂ
ಎಲ್ಲಿರಲಿ ನಮ್ಮ ಊರದೆ
ನಮಗಿನ್ನು ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನೂರೆಂಟೂ.. ಮಾತುಗಳೇಕೇ
ನೂರಾರೂ ಆಸೆಗಳೇಕೇ
ಎದುರಲ್ಲಿ ನೀನು ನಿಂತಿರೆ
ಕಣ್ಣಲ್ಲಿ ಕಣ್ಣು ಬೆರೆತಿರೆ
ನಾನಿಂದು ಹೊಸ ಲೋಕ ಕಂಡೇ….
ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲ
ನಿನ್ನಿಂದ ನನ್ನ.. ನನ್ನಿಂದ ನಿನ್ನ..
ದೂರ ಮಾಡಲು ಎಂದೂ ಆಗೋಲ್ಲ
ಕಾಲವನ್ನು ತಡೆಯೋರು ಯಾರು ಇಲ್ಲ
ಏನೊಂದೂ ಕೇಳದು ನಮಗೇ
ಬೇರೇನೂ ಬೇಡವು ನಮಗೇ
ಒಲವೊಂದೆ ನಮಗೆ ದೇವರು
ಇನ್ಯಾರು ನಮಗೆ ಕಾಣರು
ನಮಗಿನ್ನು ಸರಿ ಸಾಟಿ ಯಾರೂ ..
ಎಂದೆಂದೂ ಮುಗಿಯದೆ ಇರಲೀ
ಈ ಪಯಣಾ ಸಾಗುತಲಿರಲೀ
ನಗುನಗುತಾ ಹೀಗೆ ಬಾಳುವ
ಒಂದಾಗಿ ಮುಂದೆ ಹೋಗುವ
ಹಾಯಾಗಿ ಜೊತೆಯಾಗಿ ನಾವೂ
ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲ
ನಿನ್ನಿಂದ ನನ್ನ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲ