Kaalavallada Kaala Lyrics – C Ashwath Song Lyrics – Bhavageethe Lyrics – kalavallada kala Lyrics – Kannada Song Lyrics

Song: Negila Hidida
Album/Movie: Megha Varna
Singer: C Ashwath
Music Director: N S Prasad
Lyricist: H S Venkatesh murthy
Music Label : Lahari Music


ಕಾಲವಲ್ಲದ ಕಾಲ ದೋ ಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು
ಕಾಲವಲ್ಲದ ಕಾಲ ದೋ ಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು
ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ…..
ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ
ನಿಟ್ಟಿಸುತ ತೆರೆದಿರುವ ಬಾಗಿಲನ್ನು
ನಿಟ್ಟಿಸುತ ತೆರೆದಿರುವ ಬಾಗಿಲನ್ನು
ಮೋಡ ಮುಸುಕಿದ ಇರುಳು ಆಗಸದ ತಾರೆಗಳು
ಕಾಣದಾಗಿವೆ ಮೇಲೆ ಬಾನಿನಲ್ಲಿ
ಮೋಡ ಮುಸುಕಿದ ಇರುಳು ಆಗಸದ ತಾರೆಗಳು
ಕಾಣದಾಗಿವೆ ಮೇಲೆ ಬಾನಿನಲ್ಲಿ
ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ…..
ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ
ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ
ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ
ಕಾಲವಲ್ಲದ ಕಾಲ ದೋ ಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು
ಹೊರಗೆ ತಣ್ಣಗೆ ಗಾಳಿ… ನಡುಗುತಿವೆ ಮರ ಗಿಡ…
ಒಳಗೆ ಬಿಸಿ ಉಸಿರ ಹಬೆ ಹಾಯುತ್ತಿದೆ
ಹೊರಗೆ ತಣ್ಣಗೆ ಗಾಳಿ ನಡುಗುತಿವೆ ಮರ ಗಿಡ
ಒಳಗೆ ಬಿಸಿ ಉಸಿರ ಹಬೆ ಹಾಯುತ್ತಿದೆ
ಕಂಬನಿಯ ತನಿಮಳೆಗೆ ನೆಂದ ಮಾತಿನ ಹಕ್ಕಿ
ತುಟಿಯಂಚಿನಲಿ ತೊಪ್ಪ ತೋಯುತ್ತಿದೆ
ತುಟಿಯಂಚಿನಲಿ ತೊಪ್ಪ ತೋಯುತ್ತಿದೆ
ಕಾಲವಲ್ಲದ ಕಾಲ ದೋ ಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು
ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ…
ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ
ಕೆನ್ನೆ ಸರಪಳಿಯನ್ನು ಬರೆಯುತ್ತಿದೆ
ಮಾಮರದ ಮೇಲೊಂದು ಕೂ ಎಂಬ ಕೋಗಿಲೆ
ಕೂಗು ಬಾಗಿಲವರೆಗು ಹಾಯುತ್ತಿದೆ
ಕೂಗು ಬಾಗಿಲವರೆಗು ಹಾಯುತ್ತಿದೆ
ಕಾಲವಲ್ಲದ ಕಾಲ ದೋ ಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು
ಕಾಲವಲ್ಲದ ಕಾಲ ದೋ ಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು

Kaalavallada Kaala Lyrics –
C Ashwath Song Lyrics –
Bhavageethe Lyrics –
kalavallada kala Lyrics –
Kannada Song Lyrics

Leave a Reply

Your email address will not be published. Required fields are marked *