Journey Song Lyrics in Kannada – 777 Charlie | Rakshit Shetty

PK-Music

Music: Nobin Paul
Singers: Jassie Gift, Abhinandan Mahishale
Lyrics: Kiran Kaverappa
Backing Vocals: Pancham Jeeva, Pavan Kumar


ಮರಿದಸ ಮರಿದಸ ಮರಿದಸ
ಕನಸಿನೂರ ಸೇರೋ ಮನಕೆ ಗಡಿರೇಖೆ
ಇನ್ನೇಕೆ
ಮರಿದಸ ಮರಿದಸ ಮರಿದಸ
 
ಜೀವ್ನ ಮೂರ್ ದಿನದ ಯಾನ ನಂಗೆ
ನೀ ನಿಂಗೆ ನಾನೇನಾ
ಹೆದ್ದಾರಿ ದೂರ ತೀರಾ ಸೇರಿ ನೀಡಿದೆ
ರಹದಾರಿ
ಬಾನಾಡಿಯಂತೆ ಹಾರುವ ನಡಿ
ಮುಂಜಾವಿಗೆ ಸಂಜೆಗೇ ರಂಗೇರಿದೆ
ಸಣ್ಣ ಸಂತಸಕೆ ಸಂತಸಕೆ ಮನಸು ಮಗುವಂತಾಗಿದೆ
 
ಗುಡು ಗುಡು ಗುಡು ಗಾಡಿಲಿ ಜೊತೆಗಿರೋ
ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ ಗರಿಗೆದರುತ
ಹಾರಿಹೋಗುವ
ಅಡೆತಡೆ ಇರದಾ ದಾರಿ ಇರುವದೇ ಈ
ಭೂಮೀಲಿ
ಜೊತೆಗಿರೋ ಒಡನಾಡಿ ನೀ ಗರಿಗೆದರುತ
ಹಾರಿಹೋಗುವ
 
ನನ್ನನ್ನ ಹುಡುಕುವಾಗ ಬಂದಂತ ದಾರಿಲೀಗ
ತಿಂದು ತೇಗಿ ಸಾಗಿದ ಏಕಾಂತ ಮೌನ
ಪಂಜರ ಪರಿ ಸಾಕಾಗಿ ಬಿಡುಗಡೆ ಬಯಸಿ
ಜೀವ
ಹರಿಯಲಿ ನದಿ ಹಾಗೆ ಎಲ್ಲೆಡೇ
ಪರಿಚಿತರು ಯಾರಿಲ್ಲಿ ಅಪರಿಚಿತ
ನಾನಿಲ್ಲಿ
ನಾಳೆ ನೀರಿಕ್ಷೆಯಲ್ಲಿ ನಡೆ ಮುಂದೆ
ನಡೆ ಮುಂದೆ
ಮುಂದಿದೆ ಮುನ್ನೂರು ದಾರಿ ಮಾತುಕತೆ
ಮೌನದಿ ಸಾಗಿದೆ
ಸಣ್ಣ ಸಂತಸಕೆ ಸಂತಸಕೆ ಮನಸು ಮಗುವಂತಾಗಿದೆ
 
ಗುಡು ಗುಡು ಗುಡು ಗಾಡಿಲಿ ಜೊತೆಗಿರೋ
ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ ಗರಿಗೆದರುತ
ಹಾರಿ ಹೋಗುವ
ಓ ಓ ಓ ಓ ಓ ಓ
 



Leave a Reply

Your email address will not be published. Required fields are marked *