ಕನ್ನಡ ಭಾವಗೀತೆ
ಇಲ್ಲ ಎನ್ನುವ ಒಂದು ಮಾತಲಿ
ಸಂಗೀತ – ಶ್ರೀಮಂತ ಅವಟಿ
ಗಾಯಕಿ – ಪ್ರಭಾ ಇನಾಂದಾರ
ಸಾಹಿತ್ಯ – ವಿನಾಯಕ ಅರಳಸುರಳಿ
ಧ್ವನಿಸುರುಳಿ – ನೀನಿರದ ಬದುಕು
ಇಲ್ಲ ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ
ಗೆಲ್ಲಲಾರದೇ ಹೋದ ಒಲವದು
ಎಂದೂ ಮಾಯದ ಖಾಯಿಲೆ
ಇಲ್ಲ ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ
ಗೆಲ್ಲಲಾರದೇ ಹೋದ ಒಲವದು
ಎಂದೂ ಮಾಯದ ಖಾಯಿಲೆ
♬♬♬♬♬♬♬♬♬♬♬♬
ಮಾತು ಮಾತನು
ಪೋಣಿಸಿ ತಂದೆನು
ಒಲವ ಬಿನ್ನಹ ಹಾರವ
ಮಾತು ಮಾತನು
ಪೋಣಿಸಿ ತಂದೆನು
ಒಲವ ಬಿನ್ನಹ ಹಾರವ
ಭ್ರಮಿತ ಮತಿಯಲಿ ಅರಿಯದಾದೆನೇ
ಮನಸು ಮನಸಿನ ದೂರವ
ಭ್ರಮಿತ ಮತಿಯಲಿ ಅರಿಯದಾದೆನೇ
ಮನಸು ಮನಸಿನ ದೂರವ
ದೂರವ.. ದೂರವ..
ಇಲ್ಲ ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ
ಗೆಲ್ಲಲಾರದೇ ಹೋದ ಒಲವದು
ಎಂದೂ ಮಾಯದ ಖಾಯಿಲೆ
♬♬♬♬♬♬♬♬♬♬♬♬
ಸಮಯದಾಟದಿ ಕಂಡ ಸೋಜಿಗ
ಸತ್ಯವೆಂದೇ ನಂಬಿದೆ
ಸಮಯದಾಟದಿ ಕಂಡ ಸೋಜಿಗ
ಸತ್ಯವೆಂದೇ ನಂಬಿದೆ
ನಿಜದ ಬಣ್ಣವು ಕಾಣದಾಯಿತೇ
ಸ್ವಪ್ನ ಮುಸುಕಿದ ಕಣ್ಣಿಗೆ
ನಿಜದ ಬಣ್ಣವು ಕಾಣದಾಯಿತೇ
ಸ್ವಪ್ನ ಮುಸುಕಿದ ಕಣ್ಣಿಗೆ
ಕಣ್ಣಿಗೆ.. ಕಣ್ಣಿಗೆ..
ಇಲ್ಲ ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ
ಗೆಲ್ಲಲಾರದೇ ಹೋದ ಒಲವದು
ಎಂದೂ ಮಾಯದ ಖಾಯಿಲೆ
♬♬♬♬♬♬♬♬♬♬♬♬
ಮಂಜಿನಂದದಿ ಕರಗಿ ಹೋಯಿತೇ
ದಿವ್ಯ ಮಿಲನದ ಸ್ವಪ್ನವು
ಮಂಜಿನಂದದಿ ಕರಗಿ ಹೋಯಿತೇ
ದಿವ್ಯ ಮಿಲನದ ಸ್ವಪ್ನವು
ಎಷ್ಟು ಜನ್ಮದ ನಂಟು ಬೇಕೋ
ಬಯಸಿದೊಲವನು ಪಡೆಯಲು
ಎಷ್ಟು ಜನ್ಮದ ನಂಟು ಬೇಕೋ
ಬಯಸಿದೊಲವನು ಪಡೆಯಲು
ಪಡೆಯಲು.. ಪಡೆಯಲು..
ಇಲ್ಲ ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ
ಗೆಲ್ಲಲಾರದೇ ಹೋದ ಒಲವದು
ಎಂದೂ ಮಾಯದ ಖಾಯಿಲೆ
♬♬♬♬♬♬♬♬♬♬♬♬
ಮರೆಯಬೇಕೇ ಕಾಯಬೇಕೇ
ಬೆಳಗದಾದ ಜ್ಯೋತಿಯ
ಮರೆಯಬೇಕೇ ಕಾಯಬೇಕೇ
ಬೆಳಗದಾದ ಜ್ಯೋತಿಯ
ನೂರು ಚೆಲುವರು ಒಲಿದುಬಂದರೂ
ಮರೆಯಲಾಗದ ಪ್ರೀತಿಯ
ನೂರು ಚೆಲುವರು ಒಲಿದುಬಂದರೂ
ಮರೆಯಲಾಗದ ಪ್ರೀತಿಯ
ಪ್ರೀತಿಯ.. ಪ್ರೀತಿಯ..
ಇಲ್ಲ ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ
ಗೆಲ್ಲಲಾರದೇ ಹೋದ ಒಲವದು
ಎಂದೂ ಮಾಯದ ಖಾಯಿಲೆ
ಇಲ್ಲ ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ
ಗೆಲ್ಲಲಾರದೇ ಹೋದ ಒಲವದು
ಎಂದೂ ಮಾಯದ ಖಾಯಿಲೆ