Song: HRUDAYAKE HEDARIKE
Singer: SANJITHHEGDE, SANGEETHARAVINDRANATH
Lyrics: JAYANTHKAIKINI
Singer: SANJITHHEGDE, SANGEETHARAVINDRANATH
Lyrics: JAYANTHKAIKINI
ಹೃದಯಕೆ ಹೆದರಿಕೆ ಹೀಗೆ ನೋಡಿದರೆ
ಹುಡುಕುತ ಬರುವೆಯಾ ಹೇಳದೆ ಹೋದರೆ
ಎದೆಯಲ್ಲಿ ಬಿರುಗಾಳಿ ಮೊದಲೇನೆ ಇತ್ತು
ನೀ ನನಗೆ ಏನೆಂದು ನನಗಷ್ಟೇ ಗೊತ್ತು
ಹೃದಯಕೆ ಹೆದರಿಕೆ ಹೀಗೆ ನೋಡಿದರೆ
ಹುಡುಕುತ ಬರುವೆಯಾ ಹೇಳದೆ ಹೋದರೆ
ಓ ಮರವೇ ನಿನ್ನ ತಬ್ಬಿ ಹಬ್ಬುತಿರೋ
ಬಳ್ಳಿ ನಾನು ಮೆಲ್ಲಗೆ ವಿಚಾರಿಸು ನನ್ನ
ಮೈ ಮರೆತು ನಿನ್ನ ಮುಂದೆ ವರ್ತಿಸುವ
ಮಲ್ಲಿ ನಾನು ಕೋಪವು ನಿವಾಳಿಸು ಚಿನ್ನ
ನೀ ನನಗೆ ದೊರೆತಂಥ ಸಿಹಿಯಾದ ಮತ್ತು
ನಿನಗಾಗೋ ಕನಸೆಲ್ಲ ನನಗಷ್ಟೇ ಗೊತ್ತು
ಮುಚ್ಚಿರುವ ಕಣ್ಣಿನಲ್ಲೂ ಮೂಡಿರುವ ಬಣ್ಣ ನೀನು
ಮುತ್ತಿಡು ಮಾತಾಡುವ ಮುನ್ನ
ನೆನೆ ನೆನೆದು ತುಂಬಾ ಸೊರಗಿ ಆಗಿರುವೆ ಸಣ್ಣ ನಾನು
ಹಿಡಿಸುವೆನು ಹೃದಯದಲ್ಲಿ ನಿನ್ನ
ನಾ ನಿನ್ನ ಬಿಗಿದಪ್ಪಿ ಇರುವಂಥ ಹೊತ್ತು
ಜಗವೆಲ್ಲ ಮರೆಯಾಯ್ತು ನನಗಷ್ಟೇ ಗೊತ್ತು
ಹೃದಯಕೆ ಹೆದರಿಕೆ ಹೀಗೆ ನೋಡಿದರೆ
ಹುಡುಕುತ ಬರುವೆಯಾ ಹೇಳದೆ ಹೋದರೆ