Hodare Hogu Yaarige Beku Song Lyrics in Kannada – Raymo Kannada Movie


♪ Film: Raymo
♪ Director: Pavan Wadeyar
♪ Music: Arjun Janya
♪ Song:  Hodare Hogu Yaarige Beku  – Lyrical Video
♪ Singer: Shreya Ghoshal
♪ Lyrics: Kaviraj
♪ Starcast: Ishan, Ashika Ranganath & Others


ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ
ನಂದೊಂದು ಶ್ರದ್ಧಾಂಜಲಿ
ಜಾರದು ಒಂದು
ಕಂಬನಿ ಬಿಂದು
ಎಂದಿಗೂ ನಿಂಗಾಗಿ
ಕಣ್ಣಂಚಲಿ
ಹೃದಯ ಒಡೆದೆ
ಇರಲಿ..
ಇಂದೇ ಸೇರಿ
ಬಿಡಲಿ
ನೊಂದೋರ ಸಾಲಲ್ಲಿ
ನಂದೊಂದು ಹೆಸರು..
ನೊಂದೋರ ಸಾಲಲ್ಲಿ
ನಂದೊಂದು ಹೆಸರು..
 
ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ
ನಂದೊಂದು ಶ್ರದ್ಧಾಂಜಲಿ
 
ಚೂರಿ ಚುಚ್ಚಿ
ನೀ ಕೇಳುವೆ
ನೋವಾಯಿತೆ,
ನೋವಾಯಿತೆ
ಹಲ್ಲು ಕಚ್ಚಿ
ನಾ ಹಾಡುವೆ
ಗೊತ್ತಾಯಿತೆ,
ಗೊತ್ತಾಯಿತೆ
ಇಲ್ಲಿ ಮುಕ್ತಾಯ
ಆಗಲಿ
ನಮ್ಮ ಕಥೆ,
ನಮ್ಮ ಕಥೆ
ಒಂದು ಹೆಜ್ಜೆನೂ
ಹಾಕದೆ
ಇನ್ನೂ ಜೊತೆ,
ಇನ್ನೂ ಜೊತೆ
ನಿನ್ನ ತಪ್ಪು
ಏನು ಇಲ್ಲ ನಾನು ತಾನೆ ನಂಬಿದ್ದು
ನಂಬಿದಕ್ಕೇ
ತಾನೆ ನಿಂಗೆ ಮೋಸ ಮಾಡೋಕ್ ಆಗಿದ್ದು
ನೊಂದೋರ ಸಾಲಲ್ಲಿ
ನಂದೊಂದು ಹೆಸರು..
ನೊಂದೋರ ಸಾಲಲ್ಲಿ
ನಂದೊಂದು ಹೆಸರು..
 
ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ
ನಂದೊಂದು ಶ್ರದ್ಧಾಂಜಲಿ
 
ಚೂರು ಅಭ್ಯಾಸ
ಆದರೆ
ಒಂಟಿತನ,
ಒಂಟಿತನ
ಯಾರ ಹಂಗಿಲ್ಲ
ಬಾಳುವೆ
ನನ್ನಂತೆ
ನಾ, ನನ್ನಂತೆ ನಾ
ಈಗ ಹುಡುಕೋದು
ಎಲ್ಲಿದೆ
ನನ್ನನ್ನೇ
ನಾ, ನನ್ನನ್ನೇ ನಾ
ನಂಗೆ ಬೇಕೀಗ
ನನ್ನದೇ
ಆಲಿಂಗನ,
ಆಲಿಂಗನ
ತುಂಬಾ ದೂರ
ಬಂದ ಮೇಲು ಹಿಂದೆ ತಿರುಗಿ ನೋಡಿಲ್ಲ
ನೀನು ಯಾರು
ಅಂತ ನಾನು ಮರೆತೆ ಹೋದೆ ಸುಳ್ಳಲ್ಲ
ನೊಂದೋರ ಸಾಲಲ್ಲಿ
ನಂದೊಂದು ಹೆಸರು..
ನೊಂದೋರ ಸಾಲಲ್ಲಿ
ನಂದೊಂದು ಹೆಸರು..
 
ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ
ನಂದೊಂದು ಶ್ರದ್ಧಾಂಜಲಿ



Raymo Movie Songs Lyrics


Leave a Reply

Your email address will not be published. Required fields are marked *